ಕಾಡುಬೆಕ್ಕು ಬೇಟೆ, ಓರ್ವನ ಬಂಧನ

Arrest Kaidhi
Published on

ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯದಲ್ಲಿ ಕಾಡು ಕುರಿ ಮತ್ತು ಕಾಡುಬೆಕ್ಕು ಬೇಟೆ ಯಾಡಿದ ಇಬ್ಬರನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ತಂಡ ಅವರಲ್ಲಿ ಓರ್ವನನ್ನು ಮಾಲು ಸಮೇತ ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ.

ಕಣಕುಂಬಿ ಅರಣ್ಯದ ಸರ್ವೇ ಸಂಖ್ಯೆ 65ರಲ್ಲಿ ಬೇಟೆಗಾರರು ಸಂಚರಿಸುತ್ತಿದ್ದ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಬೇಟೆಯಾಡುತ್ತಿದ್ದ ಕಣಕುಂಬಿ ಗ್ರಾಮದ ಸುನೀಲ ನಾಯಕ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅದೇ ಗ್ರಾಮದ ಗೋಪಿ ಪಂಡಿತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಿದ್ದಾರೆ.

ಅವರಿಬ್ಬರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಲಾಗಿದೆ. ಬಂಧಿತನಿಂದ ಕಾಡುಕುರಿ ಮತ್ತು ಕಾಡುಬೆಕ್ಕುಗಳ ಮೃತದೇಹ, ಒಂದು ನಾಡ ಬಂದೂಕು, ಕತ್ತಿ, ಎರಡು ಬ್ಯಾಟರಿ ಮತ್ತು ಬೇಟೆಗೆ ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net