ಕಾರು ಶೋ ರೂಂಗೆ ನುಗ್ಗಿ ಆತಂಕ ಸೃಷ್ಟಿಸಿದ ಕಾಡು ಹಂದಿ

IMG_20211127_095212
Published on

ಮಂಗಳೂರು : ಕಾರು ಶೋರೂಂ ಆವರಣದೊಳಗೆ ಹಾಡುಹಗಲೇ ಕಾಡುಹಂದಿಯೊಂದು ನುಗ್ಗಿ ಒಬ್ಬನಿಗೆ ತಿವಿಯಲು ಯತ್ನಿಸಿ ಆತಂಕ ಸೃಷ್ಟಿಸಿದ ಘಟನೆ ಮಂಗಳೂರು ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಈ ಘಟನೆ ಕಳೆದ ಬುಧವಾರ ಮಧ್ಯಾಹ್ನ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳು ಸದ್ಯ ವೈರಲ್ ಆಗುತ್ತಿದೆ.
ಕಾಡು ಹಂದಿ ಗುದ್ದಿಕೊಂಡು ಹೋದ ಪರಿಣಾಮ ಓರ್ವ ವ್ಯಕ್ತಿಗೆ ತರಚಿದ ಗಾಯವಾಗಿದೆ. ಹಾಗು ಒಂದು ಕಾರಿಗೆ ಹಾನಿಯಾಗಿದೆ.
ಸಮೀಪದ ಕಾಡು ಪ್ರದೇಶದಿಂದ ದಿಕ್ಕು ತಪ್ಪಿ ಓಡಿ ಬಂದಿರಬೇಕು ಎಂದು ಕಾರು ಶೋ ರೂಂ ಸಿಬಂದಿ ತಿಳಿಸಿದ್ದಾರೆ.
ಈ ಹಿಂದೆ ಕಾಡು ಕೋಣ, ಚಿರತೆ ನಗರದಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಕಾಡು ಹಂದಿ ಇದಕ್ಕೆ ಸೇರ್ಪಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net