ಅಡಕೆ ತೋಟದ ಮೇಲೆ ಕಾಡುಹಂದಿ ದಾಳಿ

12ldh4
Published on

ಲಿಂಗದಹಳ್ಳಿ: ನಂದಿಬಟ್ಟಲು ಮತ್ತು ತಿಗಡ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡು ಹಂದಿಗಳು ಅಡಕೆ, ತೆಂಗು,ಬಾಳೆ ತೋಟದ ಬೆಳೆಗಳ್ನು ನಾಶ ಮಾಡುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.

ಕಲ್ಲತ್ತಿಪುರದ ರೈತ ಸೆಲ್ವರಾಜ್ ಅವರ ಜಮೀನಿನಲ್ಲಿ ಕಳೆದ 5 ವರ್ಷಗಳ ಹಿಂದೆ ಅಡಕೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು.ಮಂಗಳವಾರ ರಾತ್ರಿ ದಾಳಿ ಮಾಡಿರುವ ಕಾಡು ಹಂದಿಗಳ ಗುಂಪು ಸುಮಾರು 70ಕ್ಕೂ ಅಧಿಕ ಅಡಕೆ ಗಿಡಗಳನ್ನು ಮುರಿದು ಹಾಕಿವೆ. ಹಂದಿಗಳ ಹಾವಳಿಯಿಂದ ರೈತರು ತೋಟದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ.

ಇದುವರೆಗೂ ರಾಗಿ, ಭತ್ತ, ಜೋಳ, ಶೇಂಗಾ, ಮುಂತಾದ ಅಲ್ಪ ಕಾಲದ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದ ಕಾಡು ಹಂದಿಗಳು ಈಗ ಅಡಕೆ ತೆಂಗು, ಬಾಳೆ ತೋಟದ ಗಿಡಗಳನ್ನು ಮುರಿದು ತಿಂದು ಹಾಕುತ್ತಿವೆ ಇದರಿಂದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net