ಕಾಡು ಹಂದಿಗಳ ದಾಳಿಗೆ ಶುಂಠಿ ಬಿತ್ತನೆ ಬೀಜ ನಾಶ

31blrp3
ಮೈಲಹಳ್ಳಿ ಗ್ರಾಮದ ಮಲ್ಲೇಶ್ ಅವರ ಜಮೀನಿನಲ್ಲಿ ಶುಂಠಿ ಬಿತ್ತನೆ ಬೀಜವನ್ನು ಕಾಡು ಹಂದಿಗಳು ನಾಶ ಮಾಡಿರುವುದು.
Published on

ಬೇಲೂರು: ತಾಲೂಕಿನ ಮೈಲಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಕಾಡು ಹಂದಿಗಳ ದಾಳಿಗೆ ಶುಂಠಿ ಬಿತ್ತನೆ ಬೀಜ ನಾಶವಾಗಿದೆ.

ಗ್ರಾಮದ ನಿವಾಸಿ ಮಲ್ಲೇಶ್ ಅವರು ತಮ್ಮ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆಯುವ ಉದ್ದೇಶದಿಂದ ಜಮೀನನ್ನು ಹದಗೊಳಿಸಿದ್ದರು. ಜತೆಗೆ 10 ಚೀಲ ಶುಂಠಿ ಬಿತ್ತನೆ ಬೀಜವನ್ನು ತಂದು ಔಷಧೋಪಚಾರ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಈ ನಡುವೆ ಬಿತ್ತನೆ ಮಾಡಿದ್ದ ಶುಂಠಿ ಮೊಳಕೆಯೊಡೆದಿತ್ತು.

ಆದರೆ ಕಾಡು ಹಂದಿಗಳ ಹಿಂಡು ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಶುಂಠಿಯನ್ನು ಬುಡ ಸಮೇತ ಕಿತ್ತು ತಿಂದು ಹಾಕಿದ್ದಲ್ಲದೆ ನೆಲಸಮ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net