ಬೈಕ್ ಚಾಲಕನ ಮೇಲೆ ಕಾಡಾನೆ ದಾಳಿ

Oplus_0
Oplus_0
Published on


ಕೊಡಗು : ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಶುಕ್ರವಾರ ರಾತ್ರಿ ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ಮಾಡಿದ್ದು, ನೆಲ್ಯಹುದಿಕೇರಿಯ ಎಂ.ಜಿ.ಕಾಲನಿ ನಿವಾಸಿ ರಂಶಾದ್ (28) ಗಾಯಗೊಂಡಿದ್ದಾನೆ.


ಅರೆಕಾಡಿನಲ್ಲಿರುವ ಪತ್ನಿ ಮನೆಗೆ ತೆರಳುತ್ತಿದ್ದಾಗ ಅತ್ತಿಮಂಗಲ ತಲುಪುತ್ತಿದ್ದಂತೆ ಕಾಫಿ ತೋಟದಿಂದ ಹಠಾತ್ತನೆ ರಸ್ತೆಗೆ ಬಂದ ಕಾಡಾನೆ ಬೈಕಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಅದೇ ಮಾರ್ಗವಾಗಿ ಬರುತ್ತಿದ್ದ ಚಾಲಕರು ಗಾಯಾಳುವನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಡಿಆರ್‌ಎಫ್‌ಒ ಸುಬ್ರಾಯ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.


ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಕಳೆದ ವರ್ಷ ಬೈಕ್ ಸಾವರನನ್ನು ಬಲಿ ತೆಗೆದುಕೊಂಡಿತ್ತು. ಅರೆಕಾಡು ಗ್ರಾಮದಲ್ಲಿ ರೈತರೊಬ್ಬರನ್ನು ಬಲಿ ತೆಗೆದುಕೊಂಡಿತ್ತು. ಕಾಡಾನೆಯೊಂದು ಕಳೆದು ಹಲವು ದಿನಗಳಿಂದ ತೊಂದರೆ ಕೊಡುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.


ಕಾಡಾನೆ ಸೆರೆಗೆ ಈಗಾಗಲೇ ಅನುಮತಿ ಸಿಕ್ಕಿದ್ದು, ಆದಷ್ಟು ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು ಎಂದು ಸುಬ್ರಾಯ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net