ಕಾಡುಪ್ರಾಣಿಗಳ ದಾಂಧಲೆಗೆ ಭತ್ತದ ಬೆಳೆ ನಾಶ

26-KGL-3,,
ತಾಲೂಕಿನ ಗುಂಡಾಲ್ ಅಚ್ಚುಕಟ್ಟು ವ್ಯಾಪ್ತಿ ಯಲ್ಲಿರುವ ಸಣ್ಣಮ್ಮ ಎಂಬುವರ ಭತ್ತದ ಜಮೀನಿಗೆ ಕಾಡು ಪ್ರಾಣಿಗಳು ದಾಳಿ ನಡೆಸಿದ್ದು ಭತ್ತದ ಫಸಲನ್ನು ಹಾನಿಗೊಳಿಸಿದೆ.
Published on

ಕೊಳ್ಳೇಗಾಲ : ತಾಲೂಕಿನ ಗುಂಡಾಲ್ ಅಚ್ಚುಕಟ್ಟು ವ್ಯಾಪ್ತಿಯ ಭತ್ತದ ಜಮೀನಿಗೆ ಕಾಡು ಪ್ರಾಣಿಗಳು ಬುಧವಾರ ರಾತ್ರಿ ದಾಳಿ ನಡೆಸಿದ್ದು ಭತ್ತದ ಫಸಲನ್ನು ಹಾನಿಗೊಳಿಸಿದೆ.

ದೊಡ್ಡಿಂದುವಾಡಿ ಗ್ರಾಮದ ಸಣ್ಣಮ್ಮ ಅವರ ಜಮೀನು ಇದಾಗಿದೆ. ಇವರು ಗುಂಡಾಲ್ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಗುತ್ತಿಗೆ ಪಡೆದು 1 ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಕಾಡು ಪ್ರಾಣಿಗಳು ಹಾಳು ಮಾಡಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಷ್ಟವಾಗಿರುವ ಜಮೀನನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಸಣ್ಣಮ್ಮ ಮನವಿ ಮಾಡಿದ್ದಾರೆ.

ಗುಂಡಾಲ್ ವ್ಯಾಪ್ತಿಯಲ್ಲಿ ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದರೂ ಯಾವುದೇ ಅಧಿಕಾರಿಗಳು ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿಲ್ಲ. ಶೀಘ್ರವಾಗಿ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಹಾಗೂ ನಷ್ಟವಾದ ರೈತರಿಗೆ ಪರಿಹಾರ ಕೊಡಬೇಕು ಇಲ್ಲವಾದಲ್ಲಿ ನಮ್ಮ ರೈತ ಸಂಘದ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ಮಾದೇಶ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net