ಸುಳ್ಯ: ಸಂಪಾಜೆ ವಲಯದ ದಬ್ಬಡ್ಕ ಉಪವಲಯ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ಪ್ರಕರಣ ದಾಖಲಾಗಿದೆ. ದಾಳಿ ಸಂದರ್ಭ ಆರೋಪಿಗಳು ಪರಾರಿಯಾಗಿದ್ದು, ಮಾಂಸ ಮತ್ತು ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ಮದನ್ ಕುಮಾರ್ ಹೊಸೂರು, ಪನೆಡ್ಕ ಗಣಪತಿ ಹಾಗೂ ಪ್ರಸನ್ನ ಪನೆಡ್ಕ ಎಂದು ಗುರುತಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಪೂವಯ್ಯ ಮಾರ್ಗದರ್ಶನ ಹಾಗೂ ವಲಯ ಅರಣ್ಯಾಧಿಕಾರಿ ಮಧುಸೂದನ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಸಾರ್ ಮಹಮ್ಮದ್, ಗಸ್ತು ಅರಣ್ಯ ಪಾಲಕರಾದ ಚಂದ್ರಪ್ಪ ಬಣಕಾರ್, ಕಾರ್ತಿಕ್ ಡಿ., ಸಿಬ್ಬಂದಿ ಮನೋಜ್, ದುರ್ಗಾಪ್ರಸಾದ್, ಗಗನ್, ಶರತ್, ಶಂಕರ ಕಾರ್ಯಾಚರಣೆ ನಡೆಸಿದ್ದರು.