ಹೆಂಡತಿಯ ಲವ್ವಿ ಡವ್ವಿಗೆ ತಾಳಿ ಕಟ್ಟಿದ ಗಂಡ ಬಲಿ

crime1
Published on

ಚಿಕ್ಕಬಳ್ಳಾಪುರ: ಪೊಲೀಸ್ ಠಾಣೆಗೆ ಹೆಂಡತಿ ಸುಳ್ಳು ದೂರು ನೀಡಿದ ಹಿನ್ನೆಲೆಯಲ್ಲಿ ಬೇಸರಗೊಂಡ ಚಿಕ್ಕಬಳ್ಳಾಪುರ ತಾಲೂಕಿನ ಗುವ್ವಲಕಾನಹಳ್ಳಿಯ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗ್ರಾಮದ ಸುರೇಶ್ (38) ಮೃತ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಪತ್ನಿಯ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ. ನಿರಂತರ ಕೌಟುಂಬಿಕ ಕಲಹದಿಂದ ದಂಪತಿ ವಿವಾಹ ವಿಚ್ಚೇದನ ಪಡೆಯುವ ಹಂತಕ್ಕೆ ಹೋಗಿದ್ದರು. ಇತ್ತೀಚೆಗೆ ಪತ್ನಿಯು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಠಾಣೆಗೆ ಸುಳ್ಳು ದೂರು ನೀಡಿದ್ದಾಳೆ ಎಂಬ ಭಾವನೆಯಲ್ಲಿ ಸುರೇಶ್ ಜುಗುಪ್ಸೆಗೊಂಡಿದ್ದು ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಂಡತಿ, ಆಕೆ ಪ್ರೇಮಿ ಕಾರಣ

ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಸಾವಿಗೆ ಪತ್ನಿ ಮತ್ತು ಆಕೆಯ ಪ್ರಿಯಕರ ಕಾರಣ ಎಂದು ಹೇಳಿದ್ದಾನೆ.

ನನ್ನ ಸಾವಿಗೆ ಅವರಿಬ್ಬರು ಕಾರಣ, ನಾನು ಸತ್ತ ಮೇಲೆ ಮಣ್ಣು ಮಾಡೋಕೆ, ಅವಳಿಗಾಗಲಿ ಇಲ್ಲವೇ ಮಕ್ಕಳಿಗಾಗಲಿ ಅವಕಾಶ ಕೊಡಬೇಡಿ, ಅವರು ಕೊಟ್ಟ ಟಾರ್ಚರ್ ನಿಂದ ನಾನು ಸಾಯುತಿದ್ದೇನೆ. ಹೆಂಡತಿ ಮತ್ತು ಪ್ರಿಯಕರನ ಮೊಬೈಲ್ ಕಾಲ್ ಲೀಸ್ಟ್ ಚೆಕ್ ಮಾಡಿ, ನಾನು ಹೇಳುತ್ತಿರುವುದು ನಿಜ ಎನ್ನುವುದು ಗೊತ್ತಾಗುತ್ತದೆ ಎಂಬುದಾಗಿ ಆಡಿಯೋದಲ್ಲಿ ಹೇಳಿದ್ದಾನೆ.

ಕುಟುಂಬಸ್ಥರ ಅಳಲು

ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ವಂಶದ ಹೆಸರು ಹೇಳೋರೆ ಇಲ್ಲದಂತಾಗಿದೆ. ಇದಕ್ಕೆಲ್ಲಾ ಅವನ ಹೆಂಡತಿ ಹೇಮಾ, ಅವಳ ಪ್ರಿಯಕರ ಗಂಗಾಧರನೇ ಕಾರಣ. ಟಾರ್ಚರ್ ಕೊಟ್ಟು ತಮ್ಮನ ಆತ್ಮಹತ್ಯೆಗೆ ಕಾರಣರಾದ ಅವರಿಬ್ಬರಿಗೂ ಕಠಿಣ ಶಿಕ್ಷೆ ಆಗಬೇಕು ಎಂದು ಮೃತನ ಅಕ್ಕ ಶಶಿಕಲಾ ಅಳಲನ್ನು ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net