ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

Shirawad GP
Published on

ಕಾರವಾರ: ಪತ್ನಿ ಅಧ್ಯಕ್ಷೆಯಾದರೆ, ಪತಿ ಉಪಾಧ್ಯಕ್ಷ ಪಟ್ಟಕ್ಕೇರಿದ ಅಪರೂಪದ ಸನ್ನಿವೇಶ ಕಾರವಾರ ತಾಲೂಕಿನಲ್ಲಿ ನಡೆದಿದೆ.

ಶಿರವಾಡ ಗ್ರಾಪಂಗೆ ಅಶ್ವಿನಿ ನಾಯ್ಕ ಅಧ್ಯಕ್ಷೆಯಾದರೆ,‌ ಅವರ ಪತಿ ದಿಲೀಪ ನಾಯ್ಕ ಉಪಾಧ್ಯಕ್ಷರಾಗಿದ್ದಾರೆ.

ಈ ಹಿಂದೆ ದಿಲೀಪ ನಾಯ್ಕ ಅಧ್ಯಕ್ಷರಾಗಿದ್ದರು.‌ ಕೆಲ ದಿನಗಳ ನಂತರ ಅವರು ರಾಜೀನಾಮೆ ನೀಡಿದ್ದು ಅಶ್ವಿನಿ ಅಧ್ಯಕ್ಷ ಪಟ್ಟಕ್ಕೇರಿದ್ದರು.‌

ಈ ಬಾರಿ ಪ್ರಕಟವಾದ ಮೀಸಲಾತಿಯೂ ಇವರಿಬ್ಬರಿಗೆ ಅನುಕೂಲಕರವಾಗಿದ್ದು, ಇಬ್ಬರೂ ಮತ್ತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಅಶ್ವಿನಿ ಹಾಗೂ ದಿಲೀಪ ಬಿಜೆಪಿ ಬೆಂಬಲಿತರಾಗಿದ್ದು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಶಾಲು ಹಾಕಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net