ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ಪಟ್ಟಣದ 8ನೇ ವಾರ್ಡ್ನಲ್ಲಿ ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ಪತಿ - ಪತ್ನಿ ನಡುವೆ ಉಂಟಾದ ಜಗಳದಲ್ಲಿ ಪತ್ನಿ ಕೊಲೆಯಾಗಿದ್ದಾಳೆ.
ರಮಿಜಾಬಿ (35) ಕೊಲೆಯಾದ ಮಹಿಳೆ. ಆರೋಪಿ ಬಾಬಾಜಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದಲ್ಲಿ ರಮಿಜಾಬಿ 3 ವರ್ಷಗಳಿಂದ ಎರಡನೇ ಗಂಡ ಬಾಬಾ ಜಾನ್ನೊಂದಿಗೆ ವಾಸವಾಗಿದ್ದು, ಮಧ್ಯಾಹ್ನ ಗಂಡ ಹೆಂಡತಿ ನಡುವೆ ಕ್ಷುಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಪತ್ನಿಯನ್ನು ಗಂಡ ಬಾಬಾಜಾನ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್ ಸೇರಿ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಮಿಜಾಬಿ ಮೂಲತ@ ಶ್ರೀನಿವಾಸಪುರ ಗ್ರಾಮದವಳಾಗಿದ್ದು, ಮೊದಲು ಮುಳಬಾಗಿಲು ತಾಲೂಕಿನ ಅಲ್ಲಾಬಕಾಶ್ ಎಂಬಾತನನ್ನು ಮದುವೆಯಾಗಿದ್ದಳು. ನಂತರ ಆತನನ್ನು ಬಿಟ್ಟು
ಬಾಬಾಜಾನ್ನೊಂದಿಗೆ 2ನೇ ಮದುವೆಯಾಗಿದ್ದಳು. ಆಗಾಗ್ಗೆ ಇಬ್ಬರ ನಡುವೆ ಗಲಾಟೆಗಳು ನಡೆಯುತ್ತಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.