ವರದಕ್ಷಿಣೆ ತಾರದ ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಂದ ಪಾಪಿಗಂಡ

murder
Published on

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ರಾಳಕುಂಟೆ ಗ್ರಾಮದಲ್ಲಿ ನಿನ್ನೆ ರಾತ್ರಿ(ಬುಧವಾರ)ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆಯಾಗಿದೆ.

ಶ್ಯಾಮಲಾ (27) ಗಂಡ ಮುನಿರಾಜುನಿಂದಲೇ ಕೊಲೆಯಾದ ದುರ್ಧೈವಿ. ಬುಧವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಬಂದ ಮುನಿರಾಜು, ಹೆಂಡತಿ ಜತೆ ಗಲಾಟೆ ತೆಗೆದಿದ್ದ.

ವರದಕ್ಷಿಣೆ ತರುವಂತೆ ಶ್ಯಾಮಲಾಗೆ ಮುನಿರಾಜು ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿಯೂ ಗಂಡ-ಹೆಂಡ್ತಿ ನಡುವೆ ಜಗಳವಾಗಿದೆ. ಕುಪಿತಗೊಂಡ ಗಂಡ, ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದಿದ್ದಾರೆ. ಈತನ ಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net