ಮದ್ವೆಯಾಗಿ ಏಳೇ ತಿಂಗಳಲ್ಲಿ ಹೆಣವಾದಳು! 19 ವರ್ಷಕ್ಕೆ ದುರಂತ ಅಂತ್ಯ ಕಂಡ ಮಹಿಳೆ

hubbalii crime
Published on

ಧಾರವಾಡ: ಏಳು ತಿಂಗಳ ಹಿಂದಷ್ಟೇ ಮದುವೆಯಾಗಿ ಹೊಸ ಬದುಕಿನ ಕನಸು ಕಟ್ಟಿಕೊಂಡು ಗಂಡನ ಮನೆಯ ಹೊಸ್ತಿಲು ತುಳಿದ ಯುವತಿ ಇದೀಗ ದುರ್ಮರಣ ಕಂಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಗಂಡನ ಕೊಲೆ ಮಾಡಿದ್ದಾನೆ ಎನ್ನುವ ಆರೋಪವೂ ಕೇಳಿಬಂದಿದೆ.

ಕಲಘಟಗಿ ತಾಲ್ಲೂಕಿನ ಹುಲಗಿನಗಟ್ಟಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಲಕ್ಷ್ಮಿ ರುದ್ರಪ್ಪ ಚಿಕ್ಕಮ್ಮನವರ (19) ಕೊಲೆಯಾದ ಮಹಿಳೆ. ಈಕೆ ಏಳು ತಿಂಗಳ ಹಿಂದೆ ವೀರಭದ್ರಪ್ಪ ಚಿಕ್ಕಮ್ಮನವರ್​ ಹೆಸರಿನ ವ್ಯಕ್ತಿಗೆ ಮದುವೆಯಾಗಿದ್ದಳು. ಇದೀಗ ಆಕೆ ಜಮೀನಿನಲ್ಲಿ ಕುತ್ತಿಗೆಗೆ ಹಗ್ಗ ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಕೌಟುಂಬಿಕ ಕಲಹಗಳ ಕಾರಣದಿಂದ ಆಕೆಯ ಗಂಡನೇ ಆಕೆಯನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ದೂರಿದ್ದಾರೆ.

ಸ್ಥಳಕ್ಕೆ ಕಲಘಟಗಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net