ಪತಿ ಸತ್ತ ಎರಡೇ ತಾಸಲ್ಲಿ ಪತ್ನಿಯೂ ಮೃತ್ಯು

death CRIME WEB
Published on

ಉಳ್ಳಾಲ: ಜ್ವರದಿಂದ ಬಳಲುತ್ತಿದ್ದ ಪತಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಅವರ ಪತ್ನಿಯೂ ಮೃತಪಟ್ಟ ಪ್ರಕರಣ ಉಳ್ಳಾಲದಲ್ಲಿ ನಡೆದಿದೆ.

ಉಳ್ಳಾಲದ ಹಿರಿಯ ರಾಜಕಾರಣಿ, ಸಮಾಜ ಸೇವಕ ಮಾಸ್ತಿಕಟ್ಟೆ ನಿವಾಸಿ ನಜೀರ್ ಅಹ್ಮದ್(62) ಅವರಿಗೆ ಎರಡು ದಿನಗಳ ಜ್ವರ ಬಂದಿದ್ದು, ಬುಧವಾರ ರಾತ್ರಿ ಚಿಕಿತ್ಸೆಗಾಗಿ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಹೆಚ್ಚಿನ ಚಿಕಿತ್ಸೆ ಐಸಿಯುನಲ್ಲಿ ಸಾಧ್ಯವಾಗದ ಕಾರಣ ದೇರಳಕಟ್ಟೆ ಸಮೀಪದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಯಿತು. ಆದರೆ ಅಲ್ಲೂ ಬೆಡ್ ಇಲ್ಲ ಎಂದಿದ್ದರಿಂದ ಬೇರೆ ಆಸ್ಪತ್ರೆಗೆ ಕೊಂಡೊಯ್ಯಲೆಂದು ತೆರಳಿದರು. ಆದರೆ ಅವರು ರಾತ್ರಿ 12.30ಕ್ಕೆ ದಾರಿ ಮಧ್ಯೆಯೇ ನಿಧನರಾದರು. ಈ ಸುದ್ದಿ ಕೇಳಿ ಖಿನ್ನರಾಗಿದ್ದ ಅವರ ಪತ್ನಿ ಜಮೀಲಾ(54), ಮೃತದೇಹವನ್ನು ಮನೆಗೆ ತಂದಾಗ ಅದನ್ನು ನೋಡಿ ಇನ್ನಷ್ಟು ಖಿನ್ನತೆಗೊಳಗಾಗಿದ್ದರು. ಪತಿ ಸತ್ತ ಎರಡು ಗಂಟೆ ಬಳಿಕ(ರಾತ್ರಿ 2.30ಕ್ಕೆ) ಅವರೂ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ದಂಪತಿ ಓರ್ವ ಪುತ್ರ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net