ಪತ್ನಿ ತೀರಿಕೊಂಡಿದ್ದರಿಂದ ಮಾನಸಿಕಗೊಂಡ ಪತಿ ಆತ್ಮಹತ್ಯೆ

lady Suside+1
Published on

ಶಿಗ್ಗಾಂವಿ: ಪತ್ನಿ ತೀರಿಕೊಂಡ ಬಳಿಕ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ಪತಿ ಮಾನಸಿಕಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹುಲಗೂರ ಗ್ರಾಮದಲ್ಲಿ ನಡೆದಿದೆ.

ಯಲ್ಲಪ್ಪಗೌಡ ಶೇಖರಗೌಡ ಪಾಟೀಲ (55) ಮೃತ ವ್ಯಕ್ತಿ.

ಈತನ ಪತ್ನಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದರು. ಇದರಿಂದ ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ಯಲ್ಲಪ್ಪಗೌಡ ಮಾನಸಿಕ ಮಾಡಿಕೊಂಡಿದ್ದ. ಮದ್ಯ ಸೇವಿಸಿದ ಅಮಲಿನಲ್ಲಿ ಗ್ರಾಮದ ಶಾಲೆಯೊಂದರ ಕಾಂಪೌಂಡ್​ ಒಳಗೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹುಲಗೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net