ಹೆಂಡತಿ ಬಿಟ್ಟುಕೊಡುವಂತೆ ಮಾರಣಾಂತಿಕ ಹಲ್ಲೆ

Group fight 27 MAY 20
Published on

ಬೆಳಗಾವಿ: ಹೆಂಡತಿಯನ್ನು ಬಿಟ್ಟುಕೊಡುವಂತೆ 2 ಲಕ್ಷ ರೂ. ಆಮಿಷ ಒಡ್ಡಿದ್ದಲ್ಲದೆ, ಪತಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಕುಡಚಿಯ ಬಸವಂತ ಬಾಹುಬಲಿ ಕ್ಯಾಟನವರ (30) ಹಲ್ಲೆಗೊಳಗಾದವರು.

ಸ್ಥಳೀಯ ನಿವಾಸಿ ಬಸವರಾಜ ಮತ್ತು ಆತನ ಮೂವರು ಸಹಚರರ ವಿರುದ್ಧ ಇಲ್ಲಿನ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ. ಜು. 19ರಂದು ಬೆಳಗ್ಗೆ ಬಸವಂತ ಅವರು ಅಲಾರವಾಡಕ್ಕೆ ತೆರಳಿ ಬ್ಯಾಂಕ್‌ಗೆ ಹಣ ಪಾವತಿಸಿ ಹಿಂದಿರುಗುತ್ತಿದ್ದಾಗ ಓಮ್ನಿ ವಾಹನದಲ್ಲಿ ಬಂದು ಅಡ್ಡಗಟ್ಟಿದ ಬಸವರಾಜು ಸೇರಿ ನಾಲ್ವರು, ಬಸವಂತ ಅವರನ್ನು ಅದೇ ವಾಹನದಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ.

ಬಳಿಕ ಬೆಳಗಾವಿ ದೇವರಾಜ ಅರಸು ಹೌಸಿಂಗ್ ಬೋರ್ಡ್ ಕಾಲನಿಯ ಬಳಿ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net