ಪತಿಯ ಉತ್ತರಕ್ರಿಯೆ ದಿನವೇ ಪತ್ನಿ ಆತ್ಮಹತ್ಯೆ

Published on

ಈಶ್ವರಮಂಗಲ: ಪತಿಯ ಉತ್ತರಕ್ರಿಯೆಯ ದಿನವೇ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣಾಜೆ ಗ್ರಾಮದ ಕೊಂದ ಲಾಯ್ಕನದಲ್ಲಿ ಶನಿವಾರ ನಡೆದಿದೆ.

ಇತ್ತೀಚೆಗೆ ನಿಧನರಾದ ಕೊಂದಲ್ಕಾನ ನಿವಾಸಿ ಕೃಷ್ಣ ನಾಯ್ಕ ಅವರ ಉತ್ತರಕ್ರಿಯಾದಿ ಕಾರ್ಯದ ಅಂಗವಾಗಿ ಉಪ್ಪಿನಂಗಡಿಯಲ್ಲಿ ಪಿಂಡ ಬಿಡುವ ಸಂದರ್ಭ ಮನೆಯಲ್ಲಿದ್ದ ಕೃಷ್ಣ ನಾಯ್ಕ ಅವರ ಪತ್ನಿ ವಸಂತಿ(42) ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net