

ಬಾಗಲಕೋಟೆ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಜತೆಗೆ ಕೃಷಿ ಕೊಂಡಕ್ಕೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಹುರ್ಕಿಯಲ್ಲಿ ನಡೆದಿದೆ.
ಫಕೀರವ್ವ ನೀಲನ್ನವರ(32), ಮಕ್ಕಳಾದ ನೀಲಕಂಠ(12),ಕಲ್ಪನಾ(10) ಮೃತ ದುರ್ದೈವಿಗಳು. ಇವರು ಹಲಕುರ್ಕಿ ಗ್ರಾಮದ ಜಮೀನೊಂದರ ಕೃಷಿ ಹೊಂಡಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಫಕೀರವ್ವನ ಪತಿ ಮಂಜು ನೀಲನ್ನವರ ಮತ್ತು ಫಕೀರವ್ವ ನಡುವೆ ಕೌಟುಂಬಿಕ ಕಲಹವಿತ್ತು. ಅದೇ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮಂಜುನನ್ನು ವಶಕ್ಕೆ ಪಡೆದಿರುವ ಬಾದಾಮಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.