

ಚಿಕ್ಕಬಳ್ಳಾಪುರ: ಮದುವೆ ಹೆಸರಿನಲ್ಲಿ ವಿಧವೆಯರಿಂದ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮಹಾದೇವಪುರ ಬ್ರಿಗೇಡ್ ಲೇಕ್ ್ರಂಟ್ ಅಪಾರ್ಟ್ ಮೆಂಟ್ನ ಇ.ಸುರೇಶ್ ನಾಯ್ಡು (61 ವರ್ಷ) ಆರೋಪಿ. ವಿಧವೆಯರನ್ನು ಪರಿಚಯಿಸಿಕೊಂಡು ಮದುವೆಯಾಗಿ ಆಶ್ರಯ ಕಲ್ಪಿಸುವ ಆಸೆ ಹುಟ್ಟಿಸುವುದು, ಬಳಿಕ ನಯವಾಗಿ ಸಲುಗೆ ಬೆಳೆಸಿಕೊಂಡು ಕೊನೆಗೆ ಹಣ ಪಡೆದು ಕೈ ಕೊಡುವುದು ಈತನ ಖಯ್ಯಾಲಿಯಾಗಿತ್ತು. ಚಿಕ್ಕಬಳ್ಳಾಪುರ ನಗರ, ತಮಿಳುನಾಡು ಮೂಲದ ಮಲೇಷ್ಯಾ, ಯಶವಂತಪುರದ ಮಹಿಳೆ ಸೇರಿದಂತೆ ಹಲವರನ್ನು ವಂಚಿಸಿದ್ದು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
*ದೂರು ಕೊಟ್ಟ ಮಹಿಳೆ
ಸುರೇಶ್ ನಾಯ್ಡು ಅನೇಕ ಮಹಿಳೆಯರನ್ನು ವಂಚಿಸಿದ್ದಾರೆ. ಆದರೆ, ಚಿಕ್ಕಬಳ್ಳಾಪುರ ನಗರದ ಸಂತ್ರಸ್ಥೆ ಮಾತ್ರ ದೂರು ಕೊಟ್ಟಿದ್ದಾರೆ. ಇದರ ವಿಚಾರಣೆ ನಡೆಸಿದ ಪೊಲೀಸರು ವಂಚನೆಯ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
ಸುರೇಶ್ ನಾಯ್ಡು ಆನ್ ಲೈನ್ ವಿವಾಹ ನೋಂದಣಿ ವೆಬ್ ಸೈಟ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು ಅದರಲ್ಲಿನ ವಿಧವೆಯರಿಗೆ ಗಾಳ ಹಾಕುತ್ತಿದ್ದ. ಇದರ ನಡುವೆ ಚಿಕ್ಕಬಳ್ಳಾಪುರ ನಗರದ ಮಹಿಳೆಗೆ ಸುಳ್ಳು ಮಾಹಿತಿ ನೀಡಿದ್ದು ಮದುವೆಯಾಗಿ ಹೊಸ ಜೀವನ ನೀಡುವುದಾಗಿ ನಂಬಿಸಿದ್ದಾನೆ. ಮೊದಲು ನಿವೇಶನ ಖರೀದಿಯ ಹೆಸರಿನಲ್ಲಿ 2.80 ಲಕ್ಷ ರೂಗಳನ್ನು ಪಡೆದುಕೊಂಡಿದ್ದಾನೆ. ಬಳಿಕ ಮೊಬೈಲ್ ಸಂಪರ್ಕ ಕಳೆದುಕೊಂಡಿದ್ದು ಇದನ್ನು ಪ್ರಶ್ನಿಸಿದಾಗ ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿ ನುಣುಚಿಕೊಂಡಿದ್ದಾನೆ. ಇದರ ಬಗ್ಗೆ ಸಂತ್ರಸ್ಥೆ ದೂರ ಕೊಟ್ಟಿದ್ದು ಈಗ ಈತನಿಂದ ವಂಚನೆಗೊಳಗಾದವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.