

ನರಗುಂದ: ಪಹಲ್ಗಾಮ್ಲ್ಲಿ ಇತ್ತೀಚೆಗೆ ನಡೆದಿರುವ ಭಯೋತ್ಪಾದಕರ ದಾಳಿ ಖಂಡಿಸಿ ಪಟ್ಟಣದ ಮುಸ್ಲಿಂ ಸಮುದಾಯದವರಿಂದ ತಹಸೀಲ್ದಾರ್ ಶ್ರೀಶೈಲ ತಳವಾರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಸಿಕಂದರ ಪಠಾಣ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ ಜಮ್ಮು-ಕಾಶ್ಮೀಕಕ್ಕೆ ಪ್ರವಾಸಕ್ಕೆ ತೆರಳಿದ್ದ ಅಮಾಯಕರ ಮೇಲೆ ಭಯೋತ್ಪಾದಕರು ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದು ಖಂಡನೀಯ. ಮುಗ್ಧ ಜೀವಗಳನ್ನು ಕ್ರೂರತೆಯಿಂದ ಬಲಿ ಪಡೆದಿರುವ ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಕ್ಕಿ ಸಾಯಿಸಬೇಕು ಎಂದು ಒತ್ತಾಯಿಸಿದರು.
ಅಕ್ಬರಬೇಗ ಮುಲ್ಲಾ, ಕೆ.ಬಿ. ಖಲೀಫ್, ಡಿ.ಎಂ. ನಾಯ್ಕರ, ಹಾಪೀಜ್ ಇಬ್ರಾಹಿಂ ಮನಿಯಾರ, ಎ.ಐ. ಚೌಧರಿ, ಹಾಫೀಜ್ ಮೆಹಬೂಬ, ಎಸ್.ಎಂ. ಬಿಜಲಿಖಾನ್, ಹಟೇಲಸಾಬ್ ಮನಿಯಾರ, ಅಪ್ತರಅಹ್ಮದ್ ಪಠಾಣ, ಎಂ. ನಾಲಬಂದ, ನಜೀರ್ ಭೈರಕದಾರ,ದಾವಲ ಹೂಲಿ, ಮೌಲಾಸಾಬ್ ಅರಬಜಮಾದಾರ, ಮಕ್ತುಂ ತಬ್ಬಲಚಿ, ಚಾಂದಸಾಬ್ ಯಾವಗಲ್, ಭಾಷೇಸಾಬ್ ಗದಗ, ಇಸ್ಮಾಯಿಲ್ ಜಮಾದಾರ, ಇತರರಿದ್ದರು.