

ಜಮಖಂಡಿ: ಪಾಪಿ ಪಾಕಿಸ್ತಾನಕ್ಕೆ ತಕ್ಕ ಪ್ರಾಯಶ್ಚಿತವಾಗಲಿ ಹಾಗೂ ಭಾರತೀಯ ಸೈನಿಕರಿಗೆ ರಕ್ಷಾ ಕವಚವಾಗಿರಲಿ ಎಂದು ನಗರದ ಹನುಮಾನ ದೇವಸ್ಥಾನದಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಏ.22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಹಿಂದುಗಳನ್ನು ಗುರಿಯಾಗಿಸಿ 26 ಜನರನ್ನು ಗುಂಡಿಟ್ಟು ಕೊಂದಿರುವ ಪೈಶಾಚಿಕ ಕೃತ್ಯಕ್ಕೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಗಳು ಸೈನಿಕರಿಗೆ ನಿರ್ಬಂಧರಹಿತ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದ್ದು ಅತ್ಯಂತ ಸಂತಸದ ವಿಷಯವಾಗಿದೆ ಎಂದರು.
ಡಾ. ವಿಜಯಲಕ್ಷ್ಮೀ ತುಂಗಳ, ಯಮನೂರ ಮೂಲಂಗಿ, ಅಜಯ ಕಡಪಟ್ಟಿ, ಗಿರಮಲ್ಲಪ್ಪ ಹಂಚನಾಳ, ವಿನಾಯಕ ಪವಾರ, ವಿಶ್ವಾಸ ಪಾಟೀಲ, ಪ್ರಶಾಂತ ಗಾಯಕವಾಡ, ಶಂಕರ ಕಾಳೆ, ಗಣೇಶ ಶಿರಗಣ್ಣವರ, ರಮೇಶ ಆಲಬಾಳ, ಅಶೋಕ ಮಾಲೋಜಿ, ರಾಜು ಚಿಕನಾಳ, ಸಂತೋಷ ಮಾನೆ, ಯಮನೂರ ಮೂಲಂಗಿ, ರಾಯಬಾ ಜಾಧವ, ಮಹಾದೇವ ನ್ಯಾಮಗೌಡ, ಮಲ್ಲು ದಾನಗೌಡ, ವಿನಾಯಕ ಗವಳಿ, ನಾಗರಾಜ ತಂಗಡಗಿ, ರಾಘವೇಂದ್ರ ಮೂಲಂಗಿ, ಹೇಮಂತ ಜಾಧವ, ಪ್ರದೀಪ ಸಿಂಗಾರಿ, ಸುನೀಲ ಭೂವಿ ಮತ್ತಿತರರಿದ್ದರು.