ದುಶ್ಚಟ ಬಿಡಿಸಲು ಜೋಳಿಗೆ ಹಾಕಿದ ಮಹಾಂತ ಶ್ರೀಗಳು

mahanta shreegalu
ವಸತಿ ನಿಲಯದಲ್ಲಿ ವ್ಯಸನಮುಕ್ತ ದಿನಾಚರಣೆ ನಿಮಿತ್ತ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮೇಲ್ವಿಚಾರಕ ತುಗ್ಲೆಪ್ಪ ದೇಸಾಯಿ, ಮುನಿಸ್ವಾಮಿ, ಸಿಬ್ಬಂದಿ ಮುನಿಸ್ವಾಮಿ, ಹನುಮೇಶ, ಮಂಜಮ್ಮ, ಹುಲಿಗೆಮ್ಮ, ನಾಗಮ್ಮ ಇತರರಿದ್ದರು.
Published on

ಕನಕಗಿರಿ: ಇಳಕಲ್‌ನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ 19ನೇ ಪೀಠಾಧಿಪತಿಗಳಾದ ಡಾ. ಮಹಾಂತ ಶಿವಯೋಗಿಗಳು ಭಕ್ತರಲ್ಲಿನ ದುಶ್ಚಟಗಳನ್ನು ಬಿಡಿಸಲು ಜೋಳಿಗೆ ಹಿಡಿದು ಬೇಡುತ್ತಾ ರಾಜ್ಯ ಸುತ್ತಿದರು ಎಂದು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಪೂ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ತುಗ್ಲೆಪ್ಪ ದೇಸಾಯಿ ಹೇಳಿದರು.

ವಸತಿ ನಿಲಯದಲ್ಲಿ ವ್ಯಸನಮುಕ್ತ ದಿನಾಚರಣೆ ನಿಮಿತ್ತ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಕುಡಿತದ ವ್ಯಸನಕ್ಕೆ ಬಲಿಯಾದ ವ್ಯಕ್ತಿಯ ಪತ್ನಿ, ಸಂಸಾರದ ನೋವು ಕಂಡ ಮಹಾಂತ ಶ್ರೀಗಳು,

ಮುಂಬರುವ ದಿನಗಳಲ್ಲಿ ಇದು ಸಮಾಜಕ್ಕೆ ಮಾರಕ ಎಂದು ಅರಿತು. 1975ರಿಂದ ಬೀಡಿ, ಸಿಗರೇಟು, ಗುಟ್ಕಾ, ಮಧ್ಯದಂತಹ ದುಶ್ಚಟಗಳಿಗೆ ಬಲಿಯಾದವರಿಂದ ವ್ಯಸನದ ಪದಾರ್ಥಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಲು ಮುಂದಾಗಿದ್ದರು.

ರಾಜ್ಯಾದ್ಯಂತ ಸುತ್ತುವರಿದು ಸಾಮಾಜಿಕ ಕಾರ್ಯ ನಿರ್ವಹಿಸಿದ್ದಾರೆ. ಹಲವರು ದುಶ್ಚಟಗಳಿಂದ ದೂರು ಉಳಿದಿದ್ದಾರೆ. ಆದ್ದರಿಂದ ಶ್ರೀಗಳ ಹುಟ್ಟುಹಬ್ಬದ ದಿನದಂದು ಸರ್ಕಾರವೇ ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿದೆ ಎಂದರು. ಸಿಬ್ಬಂದಿ ಮುನಿಸ್ವಾಮಿ, ಮೈಬುಸಾಬ್, ಹನುಮೇಶ, ಮಂಜಮ್ಮ, ಹುಲಿಗೆಮ್ಮ, ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net