ನಿಮಗೇಕೆ ಮತ ಹಾಕಬೇಕು?

15 vemghal 1
ಆ.17ರಂದು ವೇಮಗಲ್​- ಕುರುಗಲ್​ ಪಟ್ಟಣ ಪಂಚಾಯಿತಿ ಚುನಾವಣೆ ಅಂಗವಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್​ ಸಾಂಗ್ರೆಷಿ ಅವರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ, ದಾಖಲೆ ಪರಿಶೀಲಿಸಿದರು. ಅಪರ ಅಧಿಕ್ಷಕ ರವಿಶಂಕರ್​, ಅಪರ ಜಿಲ್ಲಾಧಿಕಾರಿ ಎಸ್​. ಎಂ. ಮಂಗಳಾ, ತಹಸೀಲ್ದಾರ್​ ಡಾ.ನಯನಾ ಇದ್ದರು.
Published on

ಪ್ರಚಾರದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳಿಗೆ ಚುನಾವಣಾ ಆಯುಕ್ತ ಸಾಂಗ್ರೆಷಿ ಪ್ರಶ್ನೆ

ವೇಮಗಲ್​: ಆ.17ರಂದು ಕೋಲಾರ ತಾಲೂಕು ವೇಮಗಲ್​& ಕುರುಗಲ್​ ಪಟ್ಟಣ ಪಂಚಾಯಿತಿ ಚುನಾವಣೆ ನಿಗದಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್​ ಸಾಂಗ್ರೆಷಿ ಅವರು ಪಪಂಗೆ ಭೇಟಿ ನೀಡಿ, ಮತ ಕೇಂದ್ರಗಳನ್ನು ಪರಿಶೀಲಿಸಿದರು.

22 ಮತಗಟ್ಟೆಗಳಲ್ಲಿ 13,499ಮತದಾರರು ಮತ ಚಲಾಯಿಸಲಿದ್ದು, 6,561 ಪುರುಷರು, 6,938 ಮಹಿಳಾ ಮತದಾರರಿದ್ದಾರೆ. ಇದೆಲ್ಲದರ ಮಾಹಿತಿ ಜತೆಗೆ ಪರಿಶೀಲನೆ ಹಾಗೂ ಚುನಾವಣೆ ಪ್ರಕ್ರಿಯೆಗಳ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚೆ ಮಾಡಲಾಯಿತು.

ಪಟ್ಟಣದ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣಲ್ಲಿರುವ ಮತಗಟ್ಟೆಗಳನ್ನು ವೀಸಿ, ಚುನಾವಣೆಯ ಬಗ್ಗೆ ಕೆಲವು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಲು ಸೂಚನೆ ನೀಡಿದರು.

ಪುರಹಳ್ಳಿಯ ಮತಗಟ್ಟೆಗೆ ಭೇಟಿ ನೀಡಿ, ಚುನಾವಣೆಯ ಎಂಸಿಸಿ ತಂಡದ ಬಳಿ ಚರ್ಚೆ ಮಾಡಿ ಕೆಲವು ಸಲಹೆ ನೀಡಿದರು. ತದನಂತರ ವೇಮಗಲ್​ ಪಟ್ಟಣದಲ್ಲಿ ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿಗಾಗಿ ಮತದಾರರಲ್ಲಿ ಮತಯಾಚನೆ ಮಾಡುವ ಸಂದರ್ಭದಲ್ಲಿ ದಿಢೀರ್​ ಭೇಟಿ ನೀಡಿ ಆಶ್ಚರ್ಯಗೊಳಿಸಿ, ಯಾವುದೇ ಭಯ ಬೇಡ ನ್ಯಾಯ ಸಮ್ಮತ ಚುನಾವಣೆ ನಡೆಸಲು ವೀಕ್ಷಣೆಗಾಗಿ ಬಂದಿದ್ದೇವೆ ಎಂದು ತಿಳಿಸಿ ಅಭ್ಯರ್ಥಿಗಳನ್ನು

ಯಾವ ರೀತಿ ಮತಯಾಚನೆ ಮಾಡುತ್ತಿದ್ದೀರಿ?..ಹಣ ಆಮಿಷ ನೀಡುತ್ತಿದ್ದೀರಾ?..ನಿಮಗೆ ಏಕೆ ಮತ ಹಾಕಬೇಕು ಎಂದು ಜಿ.ಎಸ್​.ಸಾಂಗ್ರೆಷಿ

ಅವರು ಪ್ರಶ್ನಿಸಿದರು.

ಒಂದು ರೀತಿ ಭಯದಲ್ಲೇ ಪ್ರಶ್ನೆಗೆ ಉತ್ತರಿಸಿದ 17ನೇ ವಾರ್ಡ್​ನ ಅಭ್ಯರ್ಥಿ ಶಶಿಕಲಾ ನಾಗೇಶ್​ ನಾವು ಯಾವುದೇ ಹಣ ಆಮಿಷ ನೀಡಿಲ್ಲ. ಜನರ ಸೇವೆ ಮಾಡಲು ಹಾಗೂ ಅಧಿಕಾರದ ಆಸೆಯಲ್ಲ ಅಭಿವೃದ್ಧಿಯ ಕನಸನ್ನ ಹೊತ್ತು ಮತಯಾಚನೆ

ಮಾಡುತ್ತಿದ್ದೇವೆ ಎಂದರು.

ಉಪತಹಸಿಲ್ದಾರ್​ ಹೇಮಲತಾ, ಪಪಂ ಮುಖ್ಯಅಧಿಕಾರಿ ಎಸ್​.ಎಂ.ವೆಂಕಟೇಶ್​, ಪೊಲೀಸ್​ ಇನ್​ಸ್ಪೆಕ್ಟರ್​ ಬಿ.ಪಿ.ಮಂಜು, ರಾಜಸ್ವ ನಿರೀಕ್ಷಕ ಮಂಜುನಾಥ್​, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ.ಎನ್​.ಶಿವಾರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಎಂ.ಮುರಳಿ ಇದ್ದರು.

ತಪ್ಪದೆ ಹಕ್ಕು ಚಲಾಯಿಸಿ

ಚುನಾವಣಾ ಆಯುಕ್ತರು ಮತದಾರರಿಗೆ ಮತವನ್ನು ನೀವು ಯಾರಿಗಾದರು ಹಾಕಿ ಆದರೆ ತಪ್ಪದೇ ಮತದಾನ ಮಾಡಿ ಚುನಾವಣೆಯ ದಿನ ತಮ್ಮ ತಮ್ಮ ಮತ ಕೇಂದ್ರಗಳಿಗೆ ಆದಷ್ಟು ಬೇಗ ಮತದಾನ ಮಾಡಿ ಯಾವುದೇ ಹಣ ಆಮಿಷಗಳಿಗೆ ಒಳಗಾಗಬೇಡಿ ಎಂದು ಚುನಾವಣಾ ಆಯುಕ್ತ ಜಿ.ಎಸ್​ ಸಾಂಗ್ರೆಷಿ ತಿಳಿಸಿದರು.

ಆ.17ರಂದು ವೇಮಗಲ್​- ಕುರುಗಲ್​ ಪಟ್ಟಣ ಪಂಚಾಯಿತಿ ಚುನಾವಣೆ ಅಂಗವಾಗಿ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್​ ಸಾಂಗ್ರೆಷಿ ಅವರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ, ದಾಖಲೆ ಪರಿಶೀಲಿಸಿದರು. ಅಪರ ಅಧಿಕ್ಷಕ ರವಿಶಂಕರ್​, ಅಪರ ಜಿಲ್ಲಾಧಿಕಾರಿ ಎಸ್​. ಎಂ. ಮಂಗಳಾ, ತಹಸೀಲ್ದಾರ್​ ಡಾ.ನಯನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net