ಅಂಗೈಯಲ್ಲಿ ಬೆಣ್ಣೆ ಇದ್ದರೂ ತುಪ್ಪದ ಹುಡುಕಾಟ ಯಾಕೆ?

Why search for ghee if there is butter in the palm11
ಗೊಳಸಂಗಿ ಸಮೀಪದ ದುರ್ಗಾದೇವಿನಗರದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಗ್ರಾಪಂ ಕಾರ್ಯದರ್ಶಿ ಅಶೋಕ ಗಲಗಲಿ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿದರು. ದಸ್ತಗಿರ್​ ಗುಡಿಹಾಳ, ರವಿ ಬುಜಂಗೋಳ, ದುಂಡೇಶ ಮಮದಾಪುರ ಮತ್ತಿತರರು ಇದ್ದರು.
Published on

ಗೊಳಸಂಗಿ: ಸಮೀಪದ ದುರ್ಗಾದೇವಿನಗರದಲ್ಲಿ (ತಾಂಡಾ)ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ ಕಾರ್ಯಕ್ರಮ ಬುಧವಾರ ಆಯೋಜಿಸಲಾಗಿತ್ತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ ಕಾರ್ಯದರ್ಶಿ ಅಶೋಕ ಜಿ.ಗಲಗಲಿ, ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದೆ.

ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸುವ ಮೂಲಕ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷದಲ್ಲಿ 100 ದಿನ ಕೆಲಸ ನೀಡಲಾಗುತ್ತಿದೆ. ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ತಾಂಡಾದ ಜನರು ಅಂಗೈಯಲ್ಲಿ ಬೆಣ್ಣೆ ಹಿಡಿದುಕೊಂಡು ತುಪ್ಪಕ್ಕೆ ಹುಡುಕಾಡಿದ ರೀತಿಯಲ್ಲಿ ನಗರ ಪ್ರದೇಶಗಳಿಗೆ ಕೆಲಸಕ್ಕಾಗಿ ಗುಳೆ ಹೋಗದೆ ಸ್ವಂತ ಗ್ರಾಮದಲ್ಲೆ ಕೆಲಸ ಮಾಡಬೇಕು ಎಂದರು.

ವೈಯಕ್ತಿಕ ಯೋಜನೆಯಡಿ ಅರ್ಹ ಫಲಾನುಭವಿಗಳು ಬದು, ಕೃಷಿ ಹೊಂಡ, ದನದ ದೊಡ್ಡಿ, ಕುರಿ&ಮೇಕೆ ಶೆಡ್​, ಎರೆಹುಳು ತೊಟ್ಟಿ, ಇಂಗು ಗುಂಡಿ ಕಾಮಗಾರಿ ಮಾಡಿಕೊಳ್ಳಲು ಅವಕಾಶ ಇದೆ. ತೋಟಗಾರಿಕೆ ಬೆಳೆಗಳಾದ ದಾಳಿಂಬೆ, ದ್ರಾ, ನುಗ್ಗೆ, ಮಾವು, ಡ್ರಾಗನ್​ ಫ್ರೂಟ್​ ಸೇರಿ ವಿವಿಧ ಬೆಳೆಗಳಿಗೆ ಆರ್ಥಿಕ ಸಹಾಯ ಪಡೆಯಬಹುದು ಎಂದರು.

ತಾಲೂಕು ಪಂಚಾಯಿತಿ ಮಾಹಿತಿ, ಶಿಣ ಹಾಗೂ ಸಂವಹನ ಸಂಯೋಜಕ ದಸ್ತಗಿರ್​ ಗುಡಿಹಾಳ ಅವರು ಮಾತನಾಡಿ, ದುರ್ಬಲ ವರ್ಗದ ಜನರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಬದುಕು ಹಸನಾಗಿಸುವುದು ಯೋಜನೆ ಮುಖ್ಯ ಗುರಿಯಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ 2025&26ನೇ ಸಾಲಿನ ಕ್ರಿಯಾಯೋಜನೆ ತಯಾರಿಕೆ ಪ್ರಕ್ರಿಯೆ ಅ.2 ರಿಂದ ಆರಂಭವಾಗಿದ್ದು, ಗ್ರಾಮಸ್ಥರು ನರೇಗಾ ಕಾಮಗಾರಿ ಬೇಡಿಕೆಯನ್ನು ಕ್ಯೂ ಆರ್​ ಕೋಡ್​ ಸ್ಕಾನ್​ ಮಾಡುವ ಮೂಲಕ ಸಲ್ಲಿಸಬಹುದು. ಫಲಾನುಭವಿಗಳು ತಮ್ಮ ಮೊಬೈಲ್​ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.

ಬಿಲ್​ ಕಲೆಕ್ಟರ್​ ರವಿ ಬುಜಂಗೋಳ, ಕ್ಲರ್ಕ್​ ಕಂ ಡೇಟಾ ಎಂಟ್ರಿ ಆಪರೇಟರ್​ ದುಂಡೇಶ ಮಮದಾಪುರ, ಬಿಎಫ್​ಟಿ ರಾಜು ನಾವಿ, ಡಿಇಒ ಶಿವು ಚವ್ಹಾಣ, ಪತ್ತೇಸಾಬ್​ ಖುರೇಷಿ, ಲ್ಮ ಚವ್ಹಾಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net