ಕಾಂಗ್ರೆಸ್‌ಗೇಕೆ ಹೊಟ್ಟೆನೋವು?-ಈಶ್ವರಪ್ಪ ವ್ಯಂಗ್ಯ

K.S. Eshwarappa
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
Published on

ಶಿವಮೊಗ್ಗ: ಜೆಡಿಎಸ್‌ನವರು ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವುದಾಗಿ ಘೋಷಣೆ ಮಾಡಿದರೆ ಕಾಂಗ್ರೆಸ್‌ಗೇಕೆ ಹೊಟ್ಟೆನೋವು ಎಂದು ವ್ಯಂಗ್ಯವಾಡಿದ ಕೆ.ಎಸ್.ಈಶ್ವರಪ್ಪ, ರಾಜ್ಯದಲ್ಲಿ ಜೆಡಿಎಸ್ ಬೆಂಬಲದಿಂದ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಸ್ಥಾನವನ್ನೂ ಎನ್‌ಡಿಎ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜತೆ ಹೊಂದಾಣಿಕೆ ಅನಿವಾರ್ಯ ಅಲ್ಲದಿರಬಹುದು. ಆದರೆ ಎನ್‌ಡಿಎಗೆ ಒಂದೊಂದು ಸ್ಥಾನವೂ ಅವಶ್ಯ. ಹಿಂದೆ ಅಟಲ್ ಬಿಹಾರಿ ವಾಜಪೇಯಿ ಒಂದು ಮತದ ಕೊರತೆಯಿಂದ ಪ್ರಧಾನಿ ಸ್ಥಾನ ಕಳೆದುಕೊಂಡಿದ್ದು ನಮಗೆ ನೆನಪಿದೆ. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಸರ್ಕಾರಕ್ಕೆ ಬಿಜೆಪಿ ಬೆಂಬಲ ನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಪಡೆಯ ಅಧ್ಯಕ್ಷರಾಗಿದ್ದರು. ಅವರಿಗೆ ಮೊದಲು ಗೂಟದ ಕಾರು ಸಿಕ್ಕಿದ್ದೇ ಬಿಜೆಪಿಯಿಂದ. ಅಂದು ಬಿಜೆಪಿ ರಾಷ್ಟ್ರೀಯವಾದಿಯಾಗಿತ್ತು. ಈಗ ಸಿದ್ದರಾಮಯ್ಯ ಪಾಲಿಗೆ ನಾವು ಕೋಮುವಾದಿಗಳು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net