ರಾಯಣ್ಣ ಬ್ರಿಗೇಡ್ ನಿಲ್ಲಿಸಿದ್ದೇಕೆ: ಈಶ್ವರಪ್ಪ ಪ್ರಶ್ನೆ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಹಿಂದುಳಿದವರು, ದಲಿತರಿಗೆ ಬಿಜೆಪಿಯಲ್ಲಿ ಶಕ್ತಿ ತುಂಬಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದ್ದೆವು. ಇದಕ್ಕೆ ದಲಿತರು, ಬ್ರಾಹ್ಮಣರು, ಲಿಂಗಾಯತರು ಕೈಜೋಡಿಸಿದ್ದರು. ದೊಡ್ಡ ಶಕ್ತಿ ರಾಜ್ಯದಲ್ಲಿ ಬೆಳೆಯುತ್ತಿದೆ ಎಂದಾಗ ನಾಯಕರು ಖುಷಿ ಪಡಬೇಕಾಗಿತ್ತು. ಆದರೆ ಕೇಂದ್ರ ನಾಯಕ ಅಮಿತ್ ಷಾ ಅವರಿಗೆ ದೂರು ಕೊಟ್ಟು ಬ್ರಿಗೇಡ್ ನಿಲ್ಲಿಸಿದ್ದು ಏಕೆ ಎಂಬುದು ಇನ್ನು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಎಂಟು ತಿಂಗಳಿಂದ ಆರು ಸಚಿವ ಸ್ಥಾನಗಳು ಖಾಲಿ ಇದ್ದವು. ತಪ್ಪಿತಸ್ಥನಲ್ಲ ಎಂದು ಕ್ಲೀನ್‌ಚಿಟ್ ಸಿಕ್ಕಿತ್ತು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಇನ್ನೆರಡು ದಿನಗಳಲ್ಲಿ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಯಾಕೆ ಸಚಿವ ಸ್ಥಾನ ನೀಡಲಿಲ್ಲ ಪ್ರಶ್ನಿಸಿದರು.
ಲೋಕಸಭೆ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರು, ಮತದಾನ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ ಈಶ್ವರಪ್ಪ, ಪಕ್ಷದಲ್ಲಿನ ಆಂತರಿಕ ನ್ಯೂನತೆಗಳು ಚರ್ಚೆ ಆಗಬೇಕೆನ್ನುವ ಉದ್ದೇಶಕ್ಕೆ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ. ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಸ್ಪರ್ಧೆ ಮಾಡುವಾಗ ಮತ್ತು ಪರಿಸ್ಥಿತಿ ಸುಧಾರಣೆಗೆ ಸ್ಪರ್ಧೆ ಸೂಕ್ತ ಎಂದು ಮುಖಂಡರು ಬೆಂಬಲ ನೀಡಿದರು. ನಾಮಪತ್ರ ಸಲ್ಲಿಕೆ, ಹಲವು ಸಮಾವೇಶಗಳಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಅವರೆಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net