ಅಖಂಡ ಬಳ್ಳಾರಿ ಜಿಲ್ಲೆ ಉಳಿವಿಗೆ ಆಗ್ರಹ: ಐದು ದಿನ ಪೂರೈಸಿದ ಧರಣಿ

181220 Ballari Whole District Fight Committe Protest
ಜಿಲ್ಲೆ ವಿಭಜನೆ ವಿರೋಧಿಸಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಧರಣಿ ಶುಕ್ರವಾರ ಐದು ದಿನ ಪೂರೈಸಿತು.
Published on

ಬಳ್ಳಾರಿ: ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ (ಡಿಎಂಎ್) ಸಂಡೂರು ತಾಲೂಕಿನಿಂದ ಶೇ.90 ಹಣ ಸಂಗ್ರಹವಾಗುತ್ತಿದೆ. ಇದರಿಂದಾಗಿ ಜಿಲ್ಲೆ ವಿಭಜನೆಯಾದರೆ ನೂತನ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಪಶ್ಚಿಮ ತಾಲೂಕುಗಳಿಗೆ ಅನ್ಯಾಯವಾಗಲಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀನಹಳ್ಳಿ ತಾಯಣ್ಣ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಖಂಡ ಜಿಲ್ಲೆ ಉಳಿವಿಗಾಗಿ ಹಮ್ಮಿಕೊಂಡಿರುವ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾದ ಉಸ್ತುವಾರಿ ಸಚಿವರು ಸ್ವಾರ್ಥ ಹಾಗೂ ಪ್ರತಿಷ್ಠೆಗಾಗಿ ಜಿಲ್ಲೆ ವಿಭಜನೆಗೆ ಮುಂದಾಗಿರುವುದು ಸರಿಯಲ್ಲ. ಜಿಲ್ಲೆ ವಿಭಜನೆ ಪ್ರಕ್ರಿಯೆ ಕೈಬಿಡಬೇಕೆಂದು ಮೀನಹಳ್ಳಿ ತಾಯಣ್ಣ ಒತ್ತಾಯಿಸಿದರು. ಧರಣಿ ಶುಕ್ರವಾರ ಐದು ದಿನ ಪೂರೈಸಿತು. ಜಿಪಂ ಸದಸ್ಯರಾದ ಎ.ಮಾನಯ್ಯ, ಮುಂಡ್ರಿಗಿ ನಾಗರಾಜ, ಕೆಪಿಸಿಸಿ ಪ್ಯಾನಲಿಸ್ಟ್ ವೆಂಕಟೇಶ ಹೆಗಡೆ, ಜನಸೈನ್ಯ ಸಂಘಟನೆ ಅಧ್ಯಕ್ಷ ಕೆ.ಎರ‌್ರಿಸ್ವಾಮಿ, ಜೆಡಿಎಸ್ ಮುಖಂಡರಾದ ಕಿರಣ್, ವಿಜಯಕುಮಾರ, ಕಪ್ಪಗಲ್ಲು ರಸೂಲ್ ಸಾಬ್, ವಿಜಯಕುಮಾರಿ, ಪುಷ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net