ಅಖಂಡ ಬಳ್ಳಾರಿ ಜಿಲ್ಲೆಗಾಗಿ ರಾಜೀನಾಮೆಗೂ ಸಿದ್ಧ; ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿಕೆ

G Somashekhar Reddy 2
ಜಿ.ಸೋಮಶೇಖರ ರೆಡ್ಡಿ.
Published on

ಬಳ್ಳಾರಿ: ಜಿಲ್ಲೆ ಅಖಂಡವಾಗಿ ಉಳಿಯುವುದಕ್ಕಾಗಿ ನಾನು ರಾಜೀನಾಮೆ ನೀಡಲು ಕೂಡ ಸಿದ್ಧ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.

ಕ್ಷೇತ್ರದ ಜನರು ರಾಜೀನಾಮೆ ನೀಡಿ ಎಂದು ಹೇಳಿದರೆ 30 ಸೆಕೆಂಡ್‌ಗಳಲ್ಲಿ ನಾನು ರಾಜೀನಾಮೆ ನೀಡುತ್ತೇನೆ. ಜಿಲ್ಲೆಯ ಪಶ್ಚಿಮ ತಾಲೂಕುಗಳ ಜನರು ದೂರವಾಣಿ ಕರೆ ಮಾಡಿ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರವೇ ಇರುವುದರಿಂದ ಅನುದಾನ ತಂದು ಜಿಲ್ಲೆ ಅಭಿವೃದ್ಧಿ ಮಾಡಬಹುದೆಂದು ಹೇಳುತ್ತಿರುವುದಾಗಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ಜಿಲ್ಲೆ ವಿಭಜನೆ ವಿಚಾರವಾಗಿ ನಾನು ಸಚಿವ ಆನಂದ ಸಿಂಗ್ ಮನವೊಲಿಸುವೆ. ಜಿಲ್ಲಾ ಕೇಂದ್ರದ ಕಚೇರಿಗಳು ಹೊಸಪೇಟೆಗೆ ಸ್ಥಳಾಂತರವಾಗಲಿ. ಆದರೆ, ಜಿಲ್ಲೆ ವಿಭಜನೆ ಬೇಡ ಎಂದು ತಿಳಿಸುತ್ತೇನೆ ಎಂದು ಶಾಸಕ ಸೋಮಶೇಖರ ರೆಡ್ಡಿ ಹೇಳಿದರು.

ಕ್ರಾಸ್ ಬೀಡ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಹಿಂದೂಗಳ ಪುಣ್ಯ ಕಾರ್ಯಕ್ರಮಗಳಿಂದಾಗಿ ದೇಶ ಹೀಗಿದೆ. ಸಿದ್ದರಾಮಯ್ಯ ಹಿಂದೂ ಆಗಿ ಯಾಕೆ ಆ ರೀತಿ ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಮತಾಂತರ ಮಾಡುವುದು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. | ಜಿ.ಸೋಮಶೇಖರ ರೆಡ್ಡಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net