ದತ್ತೋಪಂತ್ ಠೇಂಗಡಿ ದುಡಿಯುವ ವರ್ಗದ ಶ್ರೇಯಕ್ಕೆ ಶ್ರಮಿಸಿದವರು: ವಿ.ರಾಧಾಕೃಷ್ಣನ್ ಬಣ್ಣನೆ

Ksd_Work-hard
Published on

ಕಾಸರಗೋಡು: ದೇಶದ ದುಡಿಯುವ ಸಮುದಾಯದ ಸವಾರ್ಂಗೀಣ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ಕರ್ಮಯೋಗಿ, ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ಸ್ವರ್ಗೀಯ ದತ್ತೋಪಂತ್ ಠೇಂಗಡಿ ಅವರ ಆದರ್ಶ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಬಿಎಂಎಸ್ ಅಖಿಲ ಭಾರತ ಕಾರ್ಯದರ್ಶಿ ವಿ.ರಾಧಾಕೃಷ್ಣನ್ ಹೇಳಿದರು.

ಕಾಸರಗೋಡು ನಗರಸಭಾ ಸಮ್ಮೇಳನ ಸಭಾಂಗಣದಲ್ಲಿ ನಡೆದ ದತ್ತೋಪಂತ್ ಠೇಂಗಡಿ ಸಂಸ್ಮರಣೆ ಹಾಗೂ ಭಾರತೀಯ ಮಜ್ದೂರ್ ಸಂಗಮ ಉದ್ಘಾಟಿಸಿ ಮಾತನಾಡಿದರು.

ಸಂಘಟನೆಯ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಉಪೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಬಾಬು ಸಂಘಟನೆಯ 70ನೇ ವರ್ಷದ ಕಾರ್ಯಕ್ರಮಗಳನ್ನು ವಿವರಿಸಿದರು.

ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಬಿ.ನಾಯರ್, ಹರೀಶ್ ಕುದ್ರೆಪ್ಪಾಡಿ, ಗೀತಾ ಬಾಲಕೃಷ್ಣನ್, ಸಿಂಧು ಮಾಯಿಪ್ಪಾಡಿ, ಯಶವಂತಿ, ಲೀಲಾಕೃಷ್ಣನ್, ಗುರುದಾಸ್ ಮಧೂರು, ಸುರೇಶ್ ದೇಳಿ, ಸುನಿಲ್ ವಾಯಕೋಡ್, ಅನೂಪ್ ಕೋಳಿಚ್ಚಲ್, ಟಿ.ಎಂ.ಕೆ.ರಾಘವನ್ ಉಪಸ್ಥಿತರಿದ್ದರು. ಸಂಘಟನೆ ರಾಜ್ಯ ಸಮಿತಿ ಸದಸ್ಯ ವಿ.ವಿ.ಬಾಲಕೃಷ್ಣನ್ ಸಮಾರೋಪ ಭಾಷಣ ಮಾಡಿದರು. ಜಿಲ್ಲಾ ಜತೆ ಕಾರ್ಯದರ್ಶಿ ಪಿ.ದಿನೇಶ್ ಸ್ವಾಗತಿಸಿದರು. ಉಪಾಧ್ಯಕ್ಷ ಭರತನ್ ಕಲ್ಯಾಣ್ ರೋಡ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net