ಎ.ಎಂ.ಪ್ರಸಾದ್, ಸೂದ್​ರಲ್ಲಿ ಯಾರಿಗೆ ಡಿಜಿ-ಐಜಿಪಿ ಪಟ್ಟ?

DG IGP
Published on

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಿವೃತ್ತಿ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ಡಿಜಿ-ಐಜಿಪಿ ನೇಮಕವಾಗಲಿದೆ. ಸೇವಾ ಹಿರಿತನ ಆಧಾರದ ಮೇಲೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರವೀಣ್ ಸೂದ್, ಪಿ.ಕೆ.ಗರ್ಗ್ ಹೆಸರು ಪಟ್ಟಿಯಲ್ಲಿವೆ.

ಈ ಮೂವರ ಪೈಕಿ ದಂಡನಾಯಕನ ಪಟ್ಟ ರಾಜ್ಯ ಆತಂರಿಕ ಭದ್ರತಾ ವಿಭಾಗ ಡಿಜಿಪಿ ಆಗಿರುವ ಬಿಹಾರ ಮೂಲದ 1985ನೇ ಬ್ಯಾಚ್​ನ ಎ.ಎಂ.ಪ್ರಸಾದ್​ಗೆ

ಸೇವಾ ಹಿರಿತನದ ಮೇಲೆ ಸಿಗುವ ಸಾಧ್ಯತೆಗಳು ಹೆಚ್ಚಾಗಿದೆ. ಸಿಐಡಿ ಡಿಜಿಪಿಯಾಗಿರುವ ಹಿಮಾಚಲಪ್ರದೇಶ ಮೂಲದ 1986ನೇ ಬ್ಯಾಚ್​ನ ಪ್ರವೀಣ್ ಸೂದ್ ಪ್ರಬಲ ಪೈಪೋಟಿಯಲ್ಲಿದ್ದಾರೆ. 9 ತಿಂಗಳ ಸೇವಾವಧಿ ಇರುವ ಪ್ರಸಾದ್, ಅಕ್ಟೋಬರ್​ನಲ್ಲಿ ನಿವೃತ್ತರಾಗಲಿದ್ದಾರೆ. ಸೂದ್​ಗೆ

4 ವರ್ಷಗಳ ಸೇವಾವಧಿ ಇದೆ. ಹೀಗಾಗಿ ಡಿಜಿಪಿ ಹುದ್ದೆಗೆ ಇವರ ಹೆಸರುಗಳು ಮುಂಚೂಣೆಯಲ್ಲಿವೆ. ಇನ್ನು ರಾಜಸ್ಥಾನ ಮೂಲದ 1986ನೇ ಬ್ಯಾಚ್​ನ ಪಿ.ಕೆ.ಗರ್ಗ್ ಅರ್ಹತೆ ಹೊಂದಿದ್ದರೂ ಇವರಿಬ್ಬರ ನಡುವೆ ಅವಕಾಶ ಸಾಧ್ಯತೆ ಕಡಿಮೆ. ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ವಿವಾದದ ಬಳಿಕ ರಾಜ್ಯದಲ್ಲಿ ಸೇವಾ ಹಿರಿತನದ ಮೇಲೆಯೇ ಡಿಜಿ-ಐಜಿಪಿ ನೇಮಕ ನಡೆದುಕೊಂಡು ಬಂದಿದೆ. ಈ ಬಾರಿಯೂ ಸೇವಾ ಹಿರಿತನ ಮಾನದಂಡದ ಮೇಲೆ ನೇಮಕಾತಿ ನಡೆಯಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net