ನಗರಸಭೆ ಗದ್ದುಗೆ ಯಾರಿಗೆ?

27 web
Published on

ಕೋಲಾರದಲ್ಲಿ ಇಂದು ಅಧ್ಯಕ್ಷ&ಉಪಾಧ್ಯಕ್ಷ ಗಾದಿಗೆ ಚುನಾವಣೆ

ಕಿರುವಾರ ಎಸ್​. ಸುದರ್ಶನ್​ ಕೋಲಾರ
ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರ ವರೆಗೆ ನಿಗದಿಯಾಗಿದ್ದು, ಅಧಿಕಾರಕ್ಕೇರಲು ರಾಜಕೀಯ ಪಕ್ಷಗಳು ತಾ ಮುಂದು, ನಾ ಮುಂದು ಎಂದು ಪೈಪೋಟಿಗೆ ಇಳಿದಿವೆ. ಒಟ್ಟು 35 ಮಂದಿ ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಬಿಸಿಎ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ (ಮಹಿಳೆ) ಮೀಸಲಾಗಿದೆ. ಗೆಲುವಿಗೆ 20 ಮತ ಬೇಕಿದೆ. ಆದರೆ, ಯಾವುದೇ ಪಕ್ಷಕ್ಕೆ ಬಹುಮತವಿಲ್ಲ. ಆದರೂ ಅಧಿಕಾರ ಹಿಡಿಯಲು ಲಾಬಿ ಜೋರಾಗಿದೆ.
ಒಂದು ಕಾಲದಲ್ಲಿ ರಾಜಕೀಯ ಶತ್ರುವಾಗಿದ್ದವರೂ ಈಗ ಮಿತ್ರರಾಗಿದ್ದಾರೆ. ಆಕಾಂಗಳು ಮತ್ತೊಂದು ಪಕ್ಷದವರ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಆಕಾಂಗಳ ಪಟ್ಟಿ ದೊಡ್ಡದಾಗಿಯೇ ಇದೆ. ಪ್ರಸಾದ್​ ಬಾಬು, ಅಪ್ಸರ್​, ಲಕ್ಷಿ$್ಮದೇವಮ್ಮ, ನಜೀಯಾ ತಾಜ್​ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಆಕಾಂಯಾಗಿದ್ದಾರೆ.ಇನ್ನು, ಜೆಡಿಎಸ್​&ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಆಕಾಂಯಾಗಿ ಮಂಜುನಾಥ್​, ಉಪಾಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಯಾರೊಬ್ಬರ ಹೆಸರೂ ಕೇಳಿ ಬಂದಿಲ್ಲ.
ಕಾಂಗ್ರೆಸ್​ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿಗಳಾದ ನಜೀರ್​ ಅಹಮದ್​, ಎಂ.ಎಲ್​.ಅನಿಲ್​ಕುಮಾರ್​ ಹಠದಲ್ಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಎರಡು ಮೂರು ಸುತ್ತು ಸದಸ್ಯರ ಸಭೆ ನಡೆಸಿ ಆಕಾಂಗಳ ಹಾಗೂ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆದರೆ ಇದುವರೆಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಕಾಂ ಘೋಷಣೆ ಮಾಡಿಲ್ಲ. ಚುನಾವಣೆಗೆ 2 ತಾಸು ಮುನ್ನ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.
ಕಾಂಗ್ರೆಸ್​ನಲ್ಲಿ 12 ಮಂದಿ ಸದಸ್ಯರಿದ್ದು, ಆದರಲ್ಲೂ ಎರಡು ಗುಂಪುಗಳಾಗಿವೆ. ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್​ ಮತ್ತೆ ಅಧಿಕಾರಕ್ಕೇರಲು ಸಜ್ಜುಗೊಂಡಿದ್ದಾರೆ. ಮತ್ತೊಂದು ಗುಂಪಿನ ಸದಸ್ಯರು ಬಿ.ಎಂ.ಮುಬಾರಕ್​ನನ್ನು ಹೊರತುಪಡಿಸಿ ಬೇರೆ ಯಾರನ್ನಾದರೂ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ. ಸದಸ್ಯ ಬಿ.ಎಂ.ಮುಬಾರಕ್​ ಅವರು ಜತೆಗೆ ಈಗ 13 ಸದಸ್ಯರ ಬಲವಿದ್ದು, ಮತ್ತೊಂದು ಗುಂಪಿನಲ್ಲಿ 10 ಮಂದಿ ಗುರುತಿಸಿಕೊಂಡಿದ್ದು, ಎರಡೂ ಗುಂಪಿನವರೂ ಪ್ರವಾಸ ತೆರಳಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ. ಬಂಡಾಯಕ್ಕೆ ತೆನೆ ಬೆಂಬಲ?
ಜೆಡಿಎಸ್​ ಸದಸ್ಯರು 8 ಹಾಗೂ ಬಿಜೆಪಿಯ ಮೂವರು ಸದಸ್ಯರ ಜತೆಗೆ ಸಂಸದ ಎಂ.ಮಲ್ಲೇಶ್​ ಬಾಬು ಹಾಗೂ ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ಅವರ ಮತಗಳು ಸೇರಿ ಒಟ್ಟು 11 ಮತಗಳಾಗುತ್ತವೆ. ಪಕ್ಷೇತರರನ್ನು ಸೆಳೆದರೆ ಅಧಿಕಾರಕ್ಕೇರಬಹುದು. ಆದರೆ 5 ಮಂದಿ ಜೆಡಿಎಸ್​ ಸದಸ್ಯರು ಕಾಂಗ್ರೆಸ್​ಗೆ ಸೇರಿರುವುದರಿಂದ ಜೆಡಿಎಸ್​ ಸಂಖ್ಯಾಬಲ ಕುಗ್ಗಿದೆ. ಇದರಿಂದ ಬಿ.ಎಂ.ಮುಬಾರಕ್​ಗೆ ಬೆಂಬಲ ಸೂಚಿಸಲು ಜೆಡಿಎಸ್​ ಮುಖಂಡರೇ ಮುಂದಾಗಿದ್ದಾರೆ ಎಂದು ಕೆಲ ಸದಸ್ಯರು ಆರೋಪಿಸಿದ್ದಾರೆ.
ಎಸ್​ಡಿಪಿಐ ನಿರ್ಣಾಯಕ: ಎಸ್​ಡಿಪಿನಲ್ಲಿ ನಾಲ್ವರು ಸದಸ್ಯರಿದ್ದು, ಇವರು ಬೆಂಬಲ ನೀಡಿದವರು ಅಧಿಕಾರಕ್ಕೆ ಬರುತ್ತಾರೆ ಎಂಬ ಮಾತಿದೆ. ಶಾಸಕ ಕೊತ್ತೂರು ಮಂಜುನಾಥ್​, ಎಸ್​ಡಿಪಿಐ ಸದಸ್ಯರನ್ನು ಸಂಪರ್ಕಿಸಿ, ಬೆಂಬಲ ನೀಡುವಂತೆ ಕೋರಿದ್ದಾರೆ.

ನಗರಸಭೆಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವಷ್ಟು ಸಂಖ್ಯಾಬಲವಿದೆ. ಮುನ್ನೆಚ್ಚರಿಕೆಯಿಂದ ಸದಸ್ಯರಿಗೆ ಈಗಾಗಲೇ ವಿಪ್​ ಜಾರಿ ಮಾಡಲಾಗಿದೆ. ನಮಗೆ ಬೇರೆ ಪಕ್ಷದವರ ಬೆಂಬಲ ದೊರೆಯುವ ವಿಶ್ವಾವಿದೆ.
ಲಕ್ಷಿ$್ಮನಾರಾಯಣ ಕಾಂಗ್ರೆಸ್​ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net