ಪೆನ್​ಡ್ರೖೆವ್ ಹಂಚಿಕೆ ಮಾಡಿದ ಮಹಾನ್ ನಾಯಕ ಯಾರು ?

New HDK 555
Published on

ಹುಬ್ಬಳ್ಳಿ : ಸಂಸದ ಪ್ರಜ್ವಲ ರೇವಣ್ಣ ಪ್ರಕರಣದಿಂದ ನಾವು ಪಲಾಯನ ಮಾಡುವುದಿಲ್ಲ. ಪ್ರಕರಣದ ತನಿಖೆ ನಡೆಸುವುದರ ಜತೆಗೆ ಅಶ್ಲೀಲ ವಿಡಿಯೋಗಳನ್ನು ಪೆನ್ ಡ್ರೖೆವ್ ಹಂಚಿದ ಮಹಾನ್ ನಾಯಕ ಯಾರು ? ಎಂಬುದರ ಬಗ್ಗೆಯೂ ತನಿಖೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಪ್ರಜ್ವಲ ರೇವಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಇದರಲ್ಲಿ ಸತ್ಯಾಸತ್ಯತೆ ಹೊರಬರುವುದು ಒಂದು ಭಾಗವಾದರೆ, ಯಾವ ಕಾರಣಕ್ಕಾಗಿ ಪೆನ್ ಡ್ರೖೆವ್ ಹಂಚಿಕೆ ಮಾಡಿದರು ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಕಾರ್ಯಕರ್ತರ ಪೆನ್​ಡ್ರೖೆವ್ ಹಂಚುವ ಮೂಲಕ ನೂರಾರು ಮಹಿಳೆಯರ ಮಾನವನ್ನು ಬೀದಿಗೆ ತಂದಿದ್ದಾರೆ. ಮಹಿಳೆಯರ ಮಾನ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಅಲ್ಲವೇ ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net