ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಯಾರು ?

New Joshi New new
Published on

ಹುಬ್ಬಳ್ಳಿ : ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಯಾರು ? ಇಂಡಿ ಒಕ್ಕೂಟ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪು್ಪತ್ತಿಲ್ಲ. ಆ ಒಕ್ಕೂಟದಲ್ಲಿಯೂ ಪ್ರಧಾನಿ ಹುದ್ದೆಗಾಗಿ ಒಮ್ಮತ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ತಮ್ಮ ಪರ ಚುನಾವಣೆ ಪ್ರಚಾರ ಬಹಿರಂಗ ಪ್ರಚಾರ ಸಭೆ ಹಾಗೂ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಳಸಾ-ಬಂಡೂರಿ ಮಲಪ್ರಭಾ ನದಿ ಜೋಡಣೆ ಯೋಜನೆಗೆ ಬಿಜೆಪಿ ಬದ್ಧ ಇದೆ. ಈ ಯೋಜನೆಯಲ್ಲಿ ಏನೇ ಪ್ರಗತಿ ಆಗಿದ್ದರೂ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಕಾರ್ಯ ಆಗಿಲ್ಲ. ಈ ಯೋಜನೆ ಬಗ್ಗೆ ಸಂಸತ್ತಿನಲ್ಲಿ ಮೊದಲು ಗಮನ ಸೆಳೆದಿದ್ದೇ ನಾನು. ಬೇಡವೆಂದರೂ ಈ ವಿಷಯವನ್ನು ನ್ಯಾಯಾಧೀಕರಣಕ್ಕೆ ಕೊಂಡೊಯ್ದಿದ್ದು ಕಾಂಗ್ರೆಸ್ ಎಂದು ದೂರಿದರು.

ನ್ಯಾಯಾಧೀಕರಣ ರಚನೆಯಾದ ಮೇಲೂ ನ್ಯಾಯಾಧೀಶರನ್ನೂ ನೇಮಿಸಲಿಲ್ಲ, ಕಚೇರಿ ಹಾಗೂ ಸಿಬ್ಬಂದಿಯನ್ನೂ ಕೊಡಲಿಲ್ಲ. ಬಿಜೆಪಿ ಸರ್ಕಾರ ಬಂದ ನಂತರ ಇದಕ್ಕೆ ವೇಗ ನೀಡಿ, ತ್ವರಿತ ಗತಿಯಲ್ಲಿ ತೀರ್ಪು ಮಾಡಿದ್ದಲ್ಲದೇ, ಗೆಜೆಟ್ ನೋಟಿಫಿಕೇಶನ್ ಸಹ ಹೊರಡಿಸಿತು. ಪರಿಸರ ಇಲಾಖೆ ಅನುಮತಿಯನ್ನೂ ಕೊಡಿಸಿದ್ದೇವೆ. ಇದೆಲ್ಲ ಆದ ಮೇಲೆ ಎಲ್ಲ ಕೆಲಸ ನಾವೇ ಮಾಡಿದ್ದು ಎಂದು ಕಾಂಗ್ರೆಸ್​ನವರು ಜಂಬ ಕೊಚ್ಚಿಕೊಳ್ಳುತ್ತಾರೆ. ಬಿಜೆಪಿ ನಿರ್ವಿುಸಿದ ನಾಲಾಕ್ಕೆ ಕಾಂಗ್ರೆಸ್​ನವರು ಗೋಡೆ ಕಟ್ಟಿದರು ಎಂದು ಆರೋಪಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ, ಶಾಸಕರಾದ ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ, ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಅಮೃತ ದೇಸಾಯಿ, ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಎಂ. ನಾಗರಾಜ, ಲಿಂಗರಾಜ ಪಾಟೀಲ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net