ಬಿಳಿ ಎತ್ತು ಕರಿ ಹರೀತು... ಹಿಂಗಾರು ಜೋರಾಗತೈತಿ....

NRGL KARI
Published on

ನರೇಗಲ್ಲ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಂಜೆ ಕಾರಹುಣ್ಣಿಮೆ ಸಂಭ್ರಮವೋ ಸಂಭ್ರಮ.

ರೈತರು ಜೋಡೆತ್ತುಗಳನ್ನು ವಿಧವಿಧವಾಗಿ ಸಿಂಗರಿಸಿದ್ದರು. ಗ್ರಾಮದಲ್ಲಿರುವ ದೇವರು ಸೇರಿದಂತೆ ಜೋಡೆತ್ತುಗಳಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕರಿ ಹರಿಯುವ ಆಚರಣೆ ನೆರವೇರಿಸಲಾಯಿತು.

ಕಂದು ಬಣ್ಣದ ಎತ್ತು ಕರಿ ಹರಿದರೆ ಮುಂಗಾರು ಜೋರಾಗತೈತಿ ಬಿಳಿ ಎತ್ತು ಕರಿ ಹರಿದರ ಹಿಂಗಾರು ಜೋರಾಗತೈತಿ ಎಂಬ ನಂಬಿಕೆ ರೈತರದು. ಅದರಂತೆ ಈ ಬಾರಿ ಪಟ್ಟಣದ ಅಗಸಿಬಾಗಿಲು ಸಂತೆ ಬಜಾರ ಬಳಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರೈತ ರಮೇಶ ಗಿಂಡು ಅವರ ಬಿಳಿ ಹೋರಿ ಕರಿ ಹರಿಯುವ ಮೂಲಕ ಹಿಂಗಾರು ಜೋರಾಗತೈತಿ ಎಂಬ ಮುನ್ಸೂಚನೆ ನೀಡಿತು.

ಕರಿ ಹರಿದು ವಿಜಯಶಾಲಿಯಾದ ಬಿಳಿ ಹೋರಿಗೆ ಓಂ ಶಿಕ್ಷಣ ಸಂಸ್ಥೆ ವತಿಯಿಂದ ನಗದು ಬಹುಮಾನ ವಿತರಿಸಲಾಯಿತು.

ಅಶೋಕ ಬೇವಿನಕಟ್ಟಿ, ಚಂದ್ರಶೇಖರಗೌಡ ಪಾಟೀಲ, ಕಳಕನಗೌಡ ಲಕ್ಕನಗೌಡ್ರ, ಬಸವರಾಜ ಜೋಳದ, ಯಲ್ಲಪ್ಪ ಜುಟ್ಲ, ಶಶಿಧರ ಓದುಸಮಠ, ಮಂಜುನಾಥ ಮ್ಯಾಗಿನಮನಿ, ಚೇತನ ಮ್ಯಾಗೇರಿ, ಶರಣಪ್ಪ ಕಲಾಲಬಂಡಿ, ಕಲ್ಮೇಶ ತೊಂಡಿಹಾಳ, ಚಂದ್ರು ಲಕ್ಕನಗೌಡ್ರ, ಸಚಿನ ಹಂಜಿ, ಸಂಗಮೇಶ ದಿಂಡೂರ, ಆನಂದ ಹೊನವಾಡ, ಜಗದೀಶ ಹೊನವಾಡ, ಕಲ್ಲಪ್ಪ ಕಡೆತೋಟದ, ಶರಣಪ್ಪ ಬೆಟಗೇರಿ, ಮೈಲಾರಪ್ಪ ಗೋಡಿ, ಶರಣಪ್ಪ ಕಳಕಣ್ಣವರ, ಶೇಖಪ್ಪ ಲಕ್ಕನಗೌಡ್ರ, ಶರಣಪ್ಪ ಕುಷ್ಟಗಿ, ನಿಂಗಪ್ಪ ಗುರಿಕಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net