

ಸಿಂಧನೂರು: ಪ್ರತಿಯೊಬ್ಬರೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳವುದರೊಂದಿಗೆ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಫಾಗಿಂಗ್ ಮಾಡುವುದರೊಂದಿಗೆ ಬ್ಲಿಚಿಂಗ್ ಪೌಡರ್ ಸಿಂಪಡಿಸಲು ಮುಂದಾಗಬೇಕೆಂದು ತಹಸೀಲ್ದಾರ್ ಅರುಣ್ ದೇಸಾಯಿ ಸೂಚನೆ ನೀಡಿದರು.
ನಗರದ ತಾಲೂಕು ಆಡಳಿತಸೌಧದಲ್ಲಿ ತಾಲೂಕು ಮಟ್ಟದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಡೆಂಘೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇದೊಂದು ವಿನಾಶಕಾರಿ ರೋಗವಾಗಿದ್ದು, ತಾಲೂಕಿನ ಸಾಲಗುಂದಾ, ಬಾದರ್ಲಿ, ಆರ್.ಎಚ್.ಕ್ಯಾಂಪ್-2, ಸಿಂಧನೂರಿನಲ್ಲಿ ಐದು ಡೆಂೆ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಐದು ದಿನಗಳವರೆಗೆ ಡೆಂೆ ಲಕ್ಷಣ ಕಾಣಿಸಿಕೊಳ್ಳುವುದಿಲ್ಲ. ನಿರ್ಲಕ್ಷ್ಯ ಮಾಡದೆ ರಕ್ತ ಪರೀಕ್ಷ್ಷೆ ಮಾಡಿಸಿಕೊಳ್ಳಬೇಕು. ಬಿಳಿರಕ್ತ ಕಣಗಳು ಕಡಿಮೆಯಾದರೆ ಜೀವಕ್ಕೆ ಅಪಾಯಕಾರಿ. ಗ್ರಾಮೀಣ ಭಾಗಗಳಲ್ಲಿ ರೋಗದ ಎಚ್ಚರ ವಹಿಸಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತೆ ವಹಿಸಲುನ ತಿಳಿಸಬೇಕು ಎಂದು ತಹಸೀಲ್ದಾರ್ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ಆರೋಗ್ಯ ಇಲಾಖೆಯಿಂದ ಡೆಂಘೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಎಡಿ ಅಮರಗುಂಡಪ್ಪ, ವಲಯ ಅರಣ್ಯಾಧಿಕಾರಿ ರುದ್ರಮುನಿ, ಸಿಡಿಪಿಒಗಳಾದ ಲಿಂಗನಗೌಡ, ಅಶೋಕ, ವಿಬಿಡಿಟಿಎಸ್ ಅಧಿಕಾರಿ ಎಫ್.ಎ.ಹಗಿ, ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಹಿರೇಮಠ, ವಿವಿಧ ಇಲಾಖೆಗಳ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.