

ಮೈಸೂರು: ದಂಪತಿ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಕಳ್ಳರು ಚಿನ್ನಾಭರಣ, ನಗದು ದೋಚಿದ್ದಾರೆ. ನಗರದ ಬಿ.ಎಂ.ಶ್ರೀನಗರದ ನಿವಾಸಿ ಬಾಬುರಾವ್ ಅವರ ಮನೆಯಲ್ಲಿ ಸುವಾರು 2.66 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 62 ಸಾವಿರ ರೂ. ಹಣ ಕಳ್ಳತನವಾಗಿದೆ.
ಬಾಬುರಾವ್ ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಜು.1ರಂದು ಸಂಬಂಧಿಕರೊಂದಿಗೆ ಕಾಶಿಗೆ ತೆರಳಿದ್ದರು. ಅಲ್ಲಿಂದ ಅಯೋಧ್ಯೆ, ತಾಜ್‌ಮಹಲ್ ಸೇರಿ ಹಲವು ಸ್ಥಳಗಳಿಗೆ ಪ್ರವಾಸ ಮಾಡಿದ್ದಾರೆ.
ಜು.12ರಂದು ಪ್ರವಾಸ ಮುಗಿಸಿ ವಾಪಸ್ ಬಂದಾಗ ಮುಂದಿನ ಬಾಗಿಲಿನ ಕೀ ಹಾಕದೆ ಹಾಗೆ ಬಾಗಿಲು ತೆಗೆದಿದ್ದರಿಂದ ಅನುವಾನ ಬಂದಿದೆ.
ಮನೆಯೊಳಗೆ ಹೋಗಿ ರೂಂನಲ್ಲಿ ಪರಿಶೀಲಿಸಿದಾಗ ಅಲ್ಲಿನ ಲಾಕರ್ ಒಡೆದು, ರಾಡ್‌ನಿಂದ ಮೀಟಿ ಚಿನ್ನಾಭರಣಗಳನ್ನು ದೋಚಿರುವುದು ಗೊತ್ತಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.