ಇರುವಾಗಲೇ ಸಾಧನೆ ಮಾಡಬೇಕು

1
ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ಈಜು ಪಟು ರಾಘವೇಂದ್ರ ಅನ್ವೇಕರ್ ಉದ್ಘಾಟಿಸಿದರು. ವಿನೋದ ಬರಗಾಲೆ, ಬಾಹುಬಲಿ ಬನಜಿಗವಾಡೆ, ಸನ್ಮತಿ ಪಾಟೀಲ ಇತರರಿದ್ದರು.
Published on

ಕಾಗವಾಡ: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಸಮಾರಂಭ ಹಾಗೂ ಪ್ರಥಮ ವರ್ಷದ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಶುಕ್ರವಾರ ಜರಗಿತು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತಾರಾಷ್ಟ್ರೀಯ ಈಜು ಪಟು ರಾಘವೇಂದ್ರ ಅನ್ವೇಕರ್ ಮಾತನಾಡಿ, ಜೀವನ ತುಂಬಾ ಚಿಕ್ಕದು ಇರುವಾಗಲೇ ಸಾಧನೆ ಮಾಡಬೇಕು ಎಂದರು. ಸನ್ಮತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿನೋದ ಬರಗಾಲೆ, ಪ್ರಾಚಾರ್ಯ ಬಾಹುಬಲಿ ಬನಜಿಗವಾಡೆ ಮಾತನಾಡಿದರು.

ಗಣ್ಯರನ್ನು ಸತ್ಕರಿಸಲಾಯಿತು. ಅಜಿತ್ ನಾಂದ್ರೆ, ಆರ್. ವಿ.ಸಂಗೋರಾಮ, ಡಾ.ಎ.ಬಿ.ಪಾಟೀಲ, ಸನ್ಮತಿ ಪಾಟೀಲ, ನೇಮಗೌಡ ಪಾಟೀಲ, ರಾಹುಲ್ ಸೌದತ್ತಿ, ಅಕ್ಕಾತಾಯಿ ಮುಜಾವರ್, ರಾಜಗೌಡ ಗೆನಪ್ಪಗೋಳ, ಯಶವಂತ ಜಾದವ, ಅಣ್ಣಾಗೌಡ ಹಂಡಗೆ, ಭರತೇಶ ನಾಂದರೆ, ಅಣ್ಣಾ ಅರವಾಡಿ, ಪ್ರಕಾಶ ಮಾಳಿ, ರಮೇಶ ಬೇಡ್ಕರ್, ರವಿ ನಾಂದ್ರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net