ಬೆಂಗಳೂರಿನ ಯಾವ್ಯಾವ ಪ್ರದೇಶಗಳು ಸೀಲ್‌ಡೌನ್? ಇಲ್ಲಿದೆ ಮಾಹಿತಿ...

KR Market
Published on

ಬೆಂಗಳೂರು: ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯ ಅನೇಕ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದ್ದು ಅದನ್ನು ಜಾರಿಗೊಳಿಸಲು ಬಿಬಿಎಂಪಿ ಸಜ್ಜಾಗಿದೆ.

ನಿರ್ದಿಷ್ಟವಾಗಿ ಯಾವ್ಯಾವ ಪ್ರದೇಶಗಳು ಸೀಲ್‌ಡೌನ್ ಆಗಲಿವೆ ಎಂಬುದರ ಪಟ್ಟಿಯನ್ನು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಪ್ರಕಟಿಸಿದ್ದಾರೆ. ಟೌನ್‌ಹಾಲ್ ಸರ್ಕಲ್, ಜೆಸಿ ರಸ್ತೆ, ಎಎಂ ರಸ್ತೆ, ಕಲಾಸಿಪಾಳ್ಯ ಮುಖ್ಯ ರಸ್ತೆ, ಕೆ.ಆರ್. ಮಾರುಕಟ್ಟೆ ಜಂಕ್ಷನ್, ಸರ್ವಿಸ್ ರಸ್ತೆ, ತರಗುಪೇಟೆ 2ನೇ ಮುಖ್ಯ ರಸ್ತೆ, ಟಿಪ್ಪು ಸುಲ್ತಾನ್ ಅರಮನೆ ರಸ್ತೆ, ತರಗುಪೇಟೆ ನಾಲ್ಕನೇ ಮುಖ್ಯರಸ್ತೆ, ಭಾಷ್ಯಂ, ಶ್ರೀನಿವಾಸ ಮಂದಿರ, ಕಿಲಾರಿ, ಆಂಜನೇಯ ದೇವಸ್ಥಾನ, ಸಂಕಲಪೇಟೆ ಹಾಗೂ ಎಸ್‌ಜೆಪಿ ರಸ್ತೆ ಇವು ಸೀಲ್‌ಡೌನ್ ಆಗಲಿರುವ ಪ್ರದೇಶಗಳು ಎಂದು ಬುಧವಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಅತ್ಯಗತ್ಯ ವಸ್ತುಗಳ ಪೂರೈಕೆ, ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳನ್ನು ಈ ಕ್ಷಣದಿಂದಲೇ ನಿಷೇಧಿಸಲಾಗಿದೆ. ಈ ಆದೇಶವನ್ನು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿದ್ದಾರೆ.

ಪಾಲಿಕೆ ಆಯುಕ್ತರು ಬಿಡುಗಡೆ ಮಾಡಿದ ಸೀಲ್ಡ್ ಏರಿಯಾದ ನಕ್ಷೆ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net