ಬರವಣಿಗೆ ವಿಷಯ ಓದುಗರನ್ನು ತಲುಪುವಂತಿರಲಿ

6 HBH 01
ಹಗರಿಬೊಮ್ಮನಹಳ್ಳಿ ರಾಮನಗರದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಲಾಯಿತು. ಹಿರಿಯ ಸಾಹಿತಿಗಳಾದ ಎ.ಆರ್.ಪಂಪಣ್ಣ, ಹುರುಕಡ್ಲಿ ಶಿವಕುಮಾರ್, ಉಪನ್ಯಾಸಕ ಅಕ್ಕಿ ಬಸವೇಶ, ಬಳಗದ ಜಿಲ್ಲಾಧ್ಯಕ್ಷ ಕೆ.ಎಸ್.ನಾಯ್ಕ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಬರಹಗಾರರನ್ನು ಪ್ರೋತ್ಸಾಹಿಸುವ ಹೊಣೆ ಸಮಾಜಕ್ಕಿದೆ ಎಂದು ಹಿರಿಯ ಸಾಹಿತಿ ಎ.ಆರ್.ಪಂಪಣ್ಣ ಹೇಳಿದರು.

ಪಟ್ಟಣದ ರಾಮನಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಬಳಗ ಹೂವಿನಹಡಗಲಿ ಹಾಗೂ ತಾಲೂಕು ಘಟಕದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಬರಹಗಾರರಿಗೂ ಅನೇಕ ಸಮಸ್ಯೆಗಳಿವೆ. ಬರೆದದ್ದನ್ನು ಪ್ರಕಟಿಸಬೇಕು. ಪ್ರಕಟಿಸಿದ್ದನ್ನು ಮಾರುಕಟ್ಟೆಗೆ ತಲುಪಿಸಬೇಕು. ಬಳಿಕ ಓದುಗರನ್ನು ತಲುಪುವಂಥ ವಿಷಯ ಬರವಣಿಗೆಯಲ್ಲಿರಬೇಕು ಎಂದರು.

ಬಳಗದ ಜಿಲ್ಲಾಧ್ಯಕ್ಷ ಕೆ.ಎಸ್.ನಾಯ್ಕ ಬರಹಗಾರರ ಬಳಗದ ಗುರಿ ಮತ್ತು ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪನ್ಯಾಸಕ ಅಕ್ಕಿ ಬಸವೇಶ ಕನ್ನಡ ಸಾಹಿತ್ಯ, ಪರಂಪರೆ, ಬರಹಗಾರರ ಹಿಂದಿರುವ ಶ್ರಮ, ಕನ್ನಡ ನಾಡು ನುಡಿ ಭಾಷೆ ಉಳಿಸುವ ಹೋರಾಟಗಳು ಪರಂಪರೆ ಕುರಿತು ಉಪನ್ಯಾಸ ನೀಡಿದರು.

ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು 35ಕ್ಕಿಂತ ಹೆಚ್ಚು ಜನ ಕವಿಗಳು ಭಾಗವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ, ಉಪ್ಪಾರ ಬಸಪ್ಪ, ಜಯಮ್ಮ ಮತ್ತಿಹಳ್ಳಿ, ಗಂಡಿ ಮಂಜುನಾಥ, ಗುರು ಹಿರೇಮಠ, ಸೇವ್ಯಾನಾಯ್ಕ, ಶಂಶದ ಬೇಗಂ, ವೀರಣ್ಣ ಕಲ್ಮನಿ, ಉಸ್ಮಾನ್ ಬಾಷಾ, ವಿವಿಧ ತಾಲೂಕುಗಳ ಅಧ್ಯಕ್ಷರಾದ ಬಸವರಾಜ, ರವೀಂದ್ರ, ವಿಜಯ ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net