

ರಾಯಬಾಗ: ಪಟ್ಟಣದ ಪುರಾತನ ಸಿದ್ದೇಶ್ವರ ದೇವಸ್ಥಾನದ ಭಕ್ತರಿಗೆ ಸಮುದಾಯ ಭವನ ನಿರ್ಮಿಸಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಜಿಪಂದಿಂದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿರುವ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಎಲ್ಲ ದೇವಸ್ಥಾನಗಳಿಗೆ ಸಮುದಾಯ ಭವನ ಸೇರಿ ಎಲ್ಲ ಸೌಕರ್ಯ ಒದಗಿಸುವುದಾಗಿ ತಿಳಿಸಿದರು.
ಬಸಯ್ಯ ನಿಶಾನಮಠ, ಸದಾಶಿವ ಘೋರ್ಪಡೆ, ಸಂಗಣ್ಣ ದತ್ತವಾಡೆ, ಅಜ್ಜಪ್ಪ ಕುಲಗುಡೆ, ಸದಾನಂದ ಹಳಿಂಗಳಿ, ಗೋವಿಂದ ಕುಲಗುಡೆ, ಸದಾಶಿವ ಮುರಗುಡೆ, ಸಿದ್ದು ಧಾಮೋಜಿ, ವಸಂತ ಕುಲಗುಡೆ, ಡಾ.ಸುರೇಶ ಬೆಳಗಾಂವಕರ, ಸುನೀಲ ಕುಸ್ತಿಗಾರ ಇದ್ದರು.