

ಅಥಣಿ: ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗದೊಂದಿಗೆ ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಸತ್ಯಸಂಗಮ ಗ್ರಾಮೀಣ ವಿಕಾಸ ಟ್ರಸ್ಟ್ ಹಾಗೂ ಮಾಡಲಗೇರಿ ಸೇವಾ ಜನನಿ ಫೌಂಡೇಷನ್ ಸಹಯೋಗದಲ್ಲಿ ಶನಿವಾರ 40 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ, ಕ್ಯಾಲಿಪರ್, ವೀಲ್‌ಚೇರ್ ಮತ್ತು ಸೈಕಲ್ ಉಚಿತವಾಗಿ ವಿತರಿಸಿ ಮಾತನಾಡಿದರು.
ಸತ್ಯ ಸಂಗಮ ಟ್ರಸ್ಟ್ ಅಧ್ಯಕ್ಷ ಚಿದಾನಂದ ಸವದಿ, ಅಮೋಘ ಖೊಬ್ರಿ, ಶಾಂತಿನಾಥ ನಂದೇಶ್ವರ, ಸುರೇಶ ಮಾಯನ್ನವರ, ಶಿವು ಗುಡ್ಡಾಪುರ, ಶ್ರೀಶೈಲ ನಾಯಿಕ, ಕಲ್ಮೇಶ ಮಡ್ಡಿ, ಪ್ರದೀಪ ನಂದಗಾಂವ, ಸಂಗಮೇಶ ಪಲ್ಲಕ್ಕಿ, ಸಿದ್ಧಪ್ಪ ಲೋಕೂರ, ಮಂಜು ಭಜಂತ್ರಿ,ಪ್ರಶಾಂತ ಅಕೊಳ್ಳ, ಆನಂದ ಮಾದಗುಡಿ ಇತರರು ಇದ್ದರು.