ಕೇಂದ್ರದ ಯೋಜನೆ ಸದುಪಯೋಗವಾಗಲಿ

9
ಐನಾಪುರದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸುನೀಲಕುಮಾರ್ ನರೋಟೆ, ಭೂಷಣ ಪಾಟೀಲ, ಮಿಲಿಂದ ವಾಗಮೋಡೆ, ಶಂಭು ಕುಡಚಿ, ಸಂತೋಷ ಭೋಯಿ ಇತರರು ಭಿತ್ತಿಪತ್ರ ಪ್ರದರ್ಶಿಸಿದರು.
Published on

ಐನಾಪುರ: ಪ್ರತಿಯೊಬ್ಬರೂ ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ಯೂನಿಯನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಸುನೀಲಕುಮಾರ್ ನರೋಟೆ ಹೇಳಿದರು.

ಇಲ್ಲಿನ ಪಪಂ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಯೂನಿಯನ್ ಬ್ಯಾಂಕ್ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಜನಸಾಮಾನ್ಯರ ಜೀವನಮಟ್ಟ ಸುಧಾರಿಸಲು ಜಾರಿಗೆ ತರಲಾಗಿದ್ದು, ಇಂತಹ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ಭೂಷಣ ಪಾಟೀಲ ಮಾತನಾಡಿ, ವಂಚಿತರಿಗೆ, ನಿರ್ಲಕ್ಷಿತರಿಗೆ, ರೈತರಿಗೆ ಸಾಮಾಜಿಕ ಭದ್ರತೆ ಹಾಗೂ ಮೂಲಸೌಕರ್ಯ ಒದಗಿಸುವುದು ಪ್ರಧಾನಮಂತ್ರಿ ಮೋದಿ ಸಂಕಲ್ಪವಾಗಿದೆ ಎಂದರು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್ ಎಲ್.ರಾಮಕೃಷ್ಣ, ರಾಕೇಶ್ ಪಾಟೀಲ್, ವಿನಾಯಕ ಹಿರೇಮಠ, ಸಂತೋಷ ಬೋವಿ, ಮಿಲಿಂದ್ ವಾಘಮೋಡೆ, ಸಂದೀಪ್ ಲೋಂಡೆ, ಮಂಜು ಕೂಡಲಗಿ, ಶಂಭು ಕುಡಚಿ, ಬಸವರಾಜ ಟಿಂಗಾಣಿ, ಅನಿಲ ಸಾವಳಿ, ದಿಲೀಪ್ ಶಿಂಧೆ, ಗೋಪಾಲ ಒಂಟಗೋಡಿ, ಅಷ್ಪಾಕ್ ಅತ್ತಾರ್, ಪಂಕಜ ಗೋಲಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net