

ಹೂವಿನಹಡಗಲಿ: ಸ್ವಚ್ಛತೆ ಎಲ್ಲಿ ಇರುತ್ತದೆಯೊ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ ಹೇಳಿದರು.
ತಾಲೂಕು ಶ್ರೀಕ್ಷೇತ್ರ ಮೈಲಾರದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ಷೇತ್ರ ಧರ್ಮಸ್ಥಳವು ಅನ್ನ, ವಸತಿ ಹಾಗೂ ಜ್ಞಾನದಾಸೋಹದ ಜತೆಗೆ ಸ್ವಚ್ಛತೆಗೆ ಮಹತ್ವ ನೀಡಿದ ಫಲವಾಗಿ ೨೦೧೬ ರಲ್ಲಿ ಅಂತರಾಷ್ಟಿçÃಯ ಪ್ರಶಸ್ತಿ ಲಭಿಸಿತು. ಇದನ್ನ ಮನಗಂಡ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಂತೆ ನಾಡಿನ ಎಲ್ಲಾ ಪುಣ್ಯ ಕ್ಷೇತ್ರಗಳ ದೇವಾಲಯಗಳ್ಳಿ ಪಾವಿತ್ರತೆ ಹೆಚ್ಚಿಸುವ ಉದ್ದೇಶದಿಂದ ವರ್ಷದಲ್ಲಿ ಎರಡುಬಾರಿ ಅಗಸ್ಟ್ ೧೫ ಹಾಗೂ ಜನೇವರಿ ೧೪ ಮಕರ ಸಂಕ್ರಾAತಿಗೆ ನಾಡಿನ ಪುಣ್ಯಕ್ಷೇತ್ರಗಳನ್ನು ಸ್ವಚ್ಛೆಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ತಾಲೂಕಿನ ಹೊಳಲು ಗ್ರಾಮದ ೫೦ಕ್ಕೂ ಹೆಚ್ಚು ಸಿಬ್ಬಂದಿಯವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಗಸ್ಟ್ ೧೫ರ ಒಳಗಾಗಿ ತಾಲೂಕಿನ ಎಲ್ಲಾ ದೇವಾಲಯ ಹಾಗೂ ಸಂಕ್ರಾತಿಯ ಒಳಗಾಗಿ ಜಿಲ್ಲೆಯ ಎಲ್ಲಾ ದೇವಾಲಯಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇವೆ ಎಂದರು.
ದೇವಸ್ಥಾನದ ವಂಶಪಾರAಪರ್ಯ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್ ಹಾಗೂ ಇತರರು ಮಾತನಾಡಿದರು. ಯೋಜನಾಧಿಕಾರಿಗಳಾದ ತಿಲಕ್‌ರಾಜ್, ರವೀಂದ್ರ, ದೇವಸ್ಥಾನದ ಸಿಬ್ಬಂದಿ ರಮೇಶ ಗ್ರಾಮಸ್ಥರಾದ ಮಾರಿತೆಪ್ಪ ಮಡಿವಾಳರ ಹಾಗೂ ಇತರರಿದ್ದರು.