

ವಿಜಯವಾಣಿ ಸುದ್ದಿಜಾಲ ತುಮಕೂರು
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರಿನ ಕೆಲವು ವಾರ್ಡ್ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆಯಾದರೂ ಸುವ್ಯವಸ್ಥಿತ ಫುಟ್ಪಾತ್ ಮಾತ್ರ ಸ್ಮಾರ್ಟ್ಸಿಟಿಯಲ್ಲಿ ಎಲ್ಲೂ ಕಾಣಿಸುತ್ತಿಲ್ಲ.
ಫುಟ್ಪಾತ್ ಸ್ಥಿತಿಗತಿಗಳ ಕುರಿತು ತುಮಕೂರಿನ ಸಾರಂಗ ಎಕಾಲಜಿ ಕನ್ಸರ್ವೇಷನ್ ಸರ್ಕಾರೇತರ ಸಂಸ್ಥೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ಮುಂದಾಗಿದ್ದು, ಮೊದಲ ಹಂತದಲ್ಲಿ ತುಮಕೂರಲ್ಲಿ ಪ್ರಾಯೋಗಿಕವಾಗಿ ನಡೆಸಿದ ಸಮೀಕ್ಷೆಯೇ ಆತಂಕ ಮೂಡಿಸುವಂತಿದೆ. ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ುಟ್ಪಾತ್ಗಳಲ್ಲಿ ಐಆರ್ಸಿ ಮಾರ್ಗಸೂಚಿ ಪಾಲಿಸಿಲ್ಲ ಎಂಬ ಬಗ್ಗೆ ಚಿತ್ರಸಹಿತ ಸಮೀಕ್ಷಾ ವರದಿ ನೀಡಿದೆ.
ಸ್ಮಾರ್ಟ್ಸಿಟಿ ಲಿ., ವತಿಯಿಂದ ನಿರ್ಮಿಸಲಾಗಿರುವ ಫುಟ್ಪಾತ್ನಲ್ಲಿ ಕಾಂಕ್ರೀಟ್ ಹಾಳಾಗಿದೆ, ಅಳವಡಿಸಿರುವ ಟೈಲ್ಸ್ಗಳು ಮುರಿದು ಚೆಲ್ಲಾಪಿಲ್ಲಿಯಾಗಿವೆ. ಕೆಲವೆಡೆ ಟೈಲ್ಸ್ಗಳೇ ಮಾಯವಾಗಿದ್ದು, ಓಡಾಟಕ್ಕೂ ತೊಂದರೆಯಾಗಿದೆ. ಸುಸೂತ್ರ ಫುಟ್ಪಾತ್ ಕನೆಕ್ಟಿವಿಟಿ ಎಲ್ಲಿಯೂ ಇಲ್ಲ. ಅಂಗಡಿ, ಮಳಿಗೆಗಳು, ಸ್ಥಳಿಯ ನಿವಾಸಿಗಳು ಫುಟ್ಪಾತ್ ಆಕ್ರಮಿಸಿಕೊಂಡಿದ್ದಾರೆ.
ನಗರಗಳಲ್ಲಿ ಫುಟ್ಪಾತ್ ಬಗ್ಗೆ ಭಾರತ ಸರ್ಕಾರ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್ಸಿ)
ಮಾರ್ಗಸೂಚಿ ರೂಪಿಸಿದ್ದು, ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಇದನ್ನು ಪರಿಗಣಿಸಿಯೇ ಇಲ್ಲ. ಟೆಂಡರ್ ಕರೆದು ಗುತ್ತಿಗೆ ನೀಡುವುದು, ತೇಪೆ ಹಚ್ಚುವ ಕೆಲಸ ಮಾಡಿ "ಇದು ಸ್ಮಾರ್ಟ್ ಸಿಟಿ' ಎಂದು ಪೋಟೋ ಹಾಕಿಕೊಳ್ಳುವುದೇ ಕಾಯಕವಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಆಗಿಂದಾಗ್ಗೆ ಬಿಸಿಮುಟ್ಟಿಸುವ ತುಮಕೂರು ನಗರ ಪಾಲಿಕೆ ನಂತರ ಸುಮ್ಮನಾಗುವುದು ರಹಸ್ಯವಾಗಿದೆ. ಅಂಗಡಿ&ಮುಂಗಟ್ಟುಗಳು, ಟೀ&ಕಾಫಿ ಅಡ್ಡಗಳು ಫುಟ್ಪಾತ್, ಸರ್ವೀಸ್ ರಸ್ತೆಗಳನ್ನು ಅತಿಕ್ರಮಿಸಿದ್ದರೂ ಆ ಕಡೆ ಗಮನವನ್ನೇ ಕೊಡುತ್ತಿಲ್ಲ. ಟ್ರಾನ್ಸ್ಾರ್ಮರ್, ನಾಮಲಕಗಳು ಫುಟ್ಪಾತ್ಗೆ ಅಡ್ಡಲಾಗಿದ್ದರೂ ಅದನ್ನು ಸ್ಥಳಾಂತರ ಮಾಡುವ ಪುರಸೊತ್ತೂ ಪಾಲಿಕೆಗೆ ಇಲ್ಲ. ಎಲ್ಲಿ ಜಾಗ ಇದೆಯೋ ಅಲ್ಲಿ ಫುಟ್ಪಾತ್ ನಿರ್ಮಾಣ ಮಾಡಿರುವುದು ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ.
ಮಾರ್ಗಸೂಚಿ ಏನು?
ಪಾದಚಾರಿ ರಸ್ತೆ ಅಗಲ ಐಆರ್ಸಿ ನಿಯಮದ ಪ್ರಕಾರ ಕನಿಷ್ಠ 6 ಅಡಿ ಇರಬೇಕು. ಆದರೆ, ತುಮಕೂರಿನ ಬಹುತೇಕ ಕಡೆಗಳಲ್ಲಿ 2 ಮತ್ತು 2.5 ಅಡಿ ಅಗಲದಲ್ಲಿ ಫುಟ್ಪಾತ್ ನಿರ್ಮಿಸಲಾಗಿದೆ. ನಿರಂತರ ಸಂಪರ್ಕ ಇರಬೇಕು. ಎಲ್ಲೂ ಸಂಪರ್ಕ ಕಡಿತವಾಗಿರಬಾರದು. ಅಡ್ಡ ರಸ್ತೆಗಳು ಬಂದಾಗ ುಟ್ಪಾತ್ನ ಎತ್ತರ ಕಡಿಮೆಯಾಗದಂತೆ ಸಮಮಟ್ಟದಲ್ಲಿ ಏರಿಸಬೇಕು. ರಸ್ತೆ ಮಟ್ಟಕ್ಕೇರಿಸಿ, ನಿರಂತರತೆ ಮುಂದುವರಿಸಿ ಎಡ, ಬಲದಲ್ಲಿ ಇಳಿಜಾರು ಮಾಡಬೇಕಿದೆ. ವ್ಯಾಪಾರ ವಲಯಗಳಲ್ಲಿ ಫುಟ್ಪಾತ್ ಅಗಲ ಮಾಡಿರಬೇಕು. ಎಲ್ಲ ಕಡೆ ವೀಲ್ಚೇರ್ನ ಚಕ್ರ ಹತ್ತುವಂತೆ, ಸಂಚರಿಸುವಂತೆ ರ್ಯಾಂಪ್ ವ್ಯವಸ್ಥೆ ಇರಬೇಕು. ಸೈಕಲ್ ಪಾತ್ಗಳು ಸೈಕಲ್ ಸವಾರರಿಗೆ ಅನುಕೂಲ ವಾಗಿರಬೇಕು. ಆದರೆ, ಬಹುತೇಕ ಕಡೆಗಳಲ್ಲಿ ಸೈಕಲ್ ಪಾತ್ಗಳು ಬೈಕ್ಗಳ ಪಾರ್ಕಿಂಗ್ ಸ್ಪಾಟ್ಗಳಾಗಿವೆ.
ಪೊಲೀಸ್ ಇಲಾಖೆ ದಾಖಲೆಗಳ ಪ್ರಕಾರ ರಾಜ್ಯದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ಶೇ.40ರಷ್ಟು ಪಾದಚಾರಿಗಳಿಗೆ ಸಾವು, ನೋವಿಗೆ ಈಡಾಗುತ್ತಿದ್ದಾರೆ. ರಸ್ತೆ, ಫುಟ್ಪಾತ್ ವೈಜ್ಞಾನಿಕವಾಗಿ ನಿರ್ಮಾಣಮಾಡದ ಕಾರಣದಿಂದ ಇಂತಹ ಅವಡಕ್ಕೆ ಕಾರಣವಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಮಾಡುವಾಗ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆಯಾಗಬೇಕು.| ಎಸ್.ಪ್ರಮೋದ್ ನಿರ್ದೇಶಕ, ಸಾರಂಗ ಎಕಾಲಜಿ ಕನ್ಸರ್ವೇಷನ್ ತುಮಕೂರು ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಎನ್ನಿಸಿಕೊಂಡಿದ್ದು, ಫುಟ್ಪಾತ್ ಕಾಮಗಾರಿ ಅವೈಜ್ಞಾನಿಕ ಎನ್ನಿಸಿದೆ. ಬಿ.ಎಚ್.ರಸ್ತೆ ಸೇರಿದಂತೆ ಯಾವೊಂದು ರಸ್ತೆಯಲ್ಲಿಯೂ ಫುಟ್ಪಾತ್ ಸರಿಯಾಗಿಲ್ಲ. ರಸ್ತೆ ಇರುವಂತೆ ಜಾಗ ಇರುವ ಕಡೆಗಳಲ್ಲಿ ಫುಟ್ಪಾತ್ ನಿರ್ಮಿಸಲಾಗಿದೆ ಹೊರತು ನೇರವಾಗಿ ಎಲ್ಲಿಯೂ ಇಲ್ಲ. ನಿರ್ಮಿಸಿರುವ ಫುಟ್ಪಾತ್ಗಳಲ್ಲಿ ಅಂಗಡಿಗಳು ವ್ಯಾಪಾರವಿಟ್ಟುಕೊಂಡಿದ್ದರೂ ಸ್ಥಳಿಯ ಆಡಳಿತ ಕಣ್ಮುಚ್ಚಿ ಕೊಳಿತಿದೆ.| ವರುಣ್ ಚಕ್ರವರ್ತಿ ಸ್ಥಳಿಯ ನಿವಾಸಿ