ಬಳಕೆಯಾಗದ ಹಣವೆಲ್ಲಿ? ಡಿ.ಎಸ್.ಅರುಣ್ ಪ್ರಶ್ನೆ

arun
ಡಿ.ಎಸ್.ಅರುಣ್, ಎಂಎಲ್‌ಸಿ
Published on

ಶಿವಮೊಗ್ಗ: ಜಿಪಂ, ತಾಪಂಗಳಲ್ಲಿ 2022-23ರ ಅವಧಿಯಲ್ಲಿ ಬಳಕೆಯಾಗದ ಸುಮಾರು 1,953 ಕೋಟಿ ರೂ. ಹಣವನ್ನು ಎಲ್ಲಿ ಬಳಸಲಾಗಿದೆ ಎಂದು ಬೆಳಗಾವಿ ಮಾತ್ರವಲ್ಲದೆ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲೂ ಪ್ರಶ್ನೆ ಕೇಳಿದ್ದೆ. ಆಗಲೂ ಸಿದ್ದರಾಮಯ್ಯ ಸುಳ್ಳು ಹೇಳಿದರು. 1,953 ಕೋಟಿ ರೂ. ಎಲ್ಲಿದೆ? ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಸಂಚಿತ ನಿಧಿಗೆ ಆ ಹಣ ಹೋಗಿದ್ದರೆ ಅದು ಮರುವರ್ಷ ಬಳಕೆಯಾಗಲೇಬೇಕು. ಬಳಕೆ ಮಾಡುವ ಸಂದರ್ಭದಲ್ಲಿ ಸಭೆಯ ಅನುಮೋದನೆ ಪಡೆಯಬೇಕು. ಆದರೆ ಅನುಮೋದನೆ ಪಡೆದಿಲ್ಲ. ಇಲ್ಲಿ ಶಾಸಕರ ಹಕ್ಕು ಮೊಟಕುಗೊಳಿಸಲಾಗಿದೆ. ಈ ಹಣದ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ರಾಜ್ಯಪಾಲರು ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದೇನೆ. ರಾಜ್ಯದ ಹಣಕಾಸು ವ್ಯವಸ್ಥೆ ಹೀಗೆ ದುರ್ಬಲವಾದರೆ ಆರ್ಥಿಕ ಶಿಸ್ತು ಹೇಗೆ ಸಾಧ್ಯ? ಇದಕ್ಕೆ ಸಿಎಂ ಕೂಡ ಕಾರಣರಾಗುತ್ತಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net