

ಹುಬ್ಬಳ್ಳಿ: ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ? ತೋರಿಸಲು ಮಾತ್ರ ಇದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜಗಳ ನಡೆಯುತ್ತಿದೆ. ಕೇರಳದ ಕಮ್ಮುನಿಷ್ಟ್ ಸರ್ಕಾರ ಘಮಂಡಿ ಘಟಬಂಧನ ಎನ್ನುತ್ತಿದೆ. ಅತ್ಯಾಚಾರ ಮಾಡುತ್ತಿದೆ ಎಂದಿದೆ. ನಮ್ಮ ಕಾರ್ಯಕರ್ತರನ್ನು ಹೊಡಿತಾ ಇದ್ದಾರೆ ಅಂತಿದ್ದಾರೆ. ಘಟ ಬಂಧನದಲ್ಲಿ ಹೊಂದಾಣಿಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಮುರುಕ ಘಟಬಂಧನದಲ್ಲಿ ಸೋತರೆ ಗಾಂಧಿ ಕುಟುಂಬದ ಮೇಲೆ ಬರಬಾರದು ಎನ್ನುವ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿ ಕೊಡುವ ಪ್ರಯತ್ನ ನಡೆದಿದೆ ಎಂದು ದೂರಿದರು.
ಮಣಿಪುರ ಸರ್ಕಾರ ಭಾರತ ಜೋಡೋ ಯಾತ್ರೆಗೆ ಅನುಮತಿ ಕೊಟ್ಟಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದ್ದಕ್ಕೆ ಉತ್ತರ ಕೊಟ್ಟಿದ್ದೆ. ರಾಹುಲ್ ಗಾಂಧಿ ಪ್ರಚಾರ ಮಾಡದೇ ಇರುವುದು ಒಳ್ಳೆಯದು. ಓಡಾಡಿದಷ್ಟು ರಾಹುಲ್ ಏನು ಅಂತ ಜನರು ನೋಡುತ್ತಾರೆ ಎಂದು ಕುಟುಕಿದರು. ಜಗದೀಶ ಶೆಟ್ಟರ್ ಘರ್‌ವಾಪ್ಸಿ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಅದು ಸಂಬಂಧವೂ ಇಲ್ಲ.
ರಾಮ ಮಂದಿರ ವಿಷಯವಾಗಿ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ಸಹಜವಾಗಿ ಬಂದಿದ್ದರೆ ಯಾವ ಚರ್ಚೆಯೂ ಆಗುತ್ತಿರಲಿಲ್ಲ. ಎಲ್ಲಿ ಮತ ಸಿಗುತ್ತದೋ ಅಲ್ಲಿಗೆ ಹೋಗುವ ವಿಚಾರ ಕಾಂಗ್ರೆಸ್‌ನದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ಅಲ್ಲಿಗೆ ಹೋದರೆ ಈ ವರ್ಗದ ಮತಗಳು ನಷ್ಟವಾಗಬಹುದೆಂಬ ವಿಚಾರ ಮಾಡಿದ್ದಾರೆ. ಕಾಂಗ್ರೆಸ್‌ನವರು ಬಂದರೆ ಸಂತೋಷ. ಆದರೆ ಬಂದಿಲ್ಲ ಓಕೆ. ಕೊತ್ವಾಲ್ ಚೋರ್ ಕೋ ಡಾಟಾ ಎಂಬ ಗಾದೆ ಮಾತಿನಂತೆ ಇದಕ್ಕೆ ನಾವು ಪ್ರತಿಕ್ರಿಯೆ ನೀಡುತ್ತಿಲ್ಲ. ಜನರು ನೀಡುತ್ತಿದ್ದಾರೆ ಎಂದರು.
ಒಳ್ಳೆಯ ವಾತಾವರಣದಲ್ಲಿ ರಾಮ ಮಂದಿರ ಉದ್ಘಾಟನೆ ಆಗಬೇಕು. ಬಾಬ್ರಿ ಮಸೀದಿಯಂತೆ ಭಟ್ಕಳ ಮಸೀದಿ ನಿರ್ನಾಮದಂಥ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಹಾನಗಲ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲೂ ರಾಜ್ಯ ಸರ್ಕಾರ ತುಷ್ಟೀಕರ ರಾಜಕೀಯ ಮಾಡುತ್ತಿರುವುದು ಸ್ಪಷ್ಟವಾಗಿದೆ. ಸಿದ್ದರಾಮಯ್ಯ ನೈತಿಕ ಪೊಲೀಸ್ ಗಿರಿ ಬಗ್ಗೆ ದೊಡ್ಡದಾಗಿ ಮಾತನಾಡಿದ್ದರು. ಯುವತಿ ಮೇಲೆ ಅತ್ಯಾಚಾರ ಆಗಿದೆ. ದೂರೂ ಕೊಟ್ಟಿದ್ದಾಳೆ. ಗೃಹಮಂತ್ರಿ, ಪೊಲೀಸರ ಧೋರಣೆ ನೈತಿಕ ಪೊಲೀಸ್‌ಗಿರಿ. ಇದನ್ನೆಲ್ಲ ನೋಡಿದರೆ ಸರ್ಕಾರ ಯಾರನ್ನು ರಕ್ಷಿಸಲು ಹೊರಟಿದೆ ಎನ್ನುವುದು ಸ್ಪಷ್ಟವಾಗಿದೆ. ದಕ್ಷ ಅಧಿಕಾರಿಗಳನ್ನು ನೇಮಿಸಿ, ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅನ್ಯಜಾತಿಯವರು ಮಾಡಿದ್ದರೆ ಈ ವಿಷಯ ದೊಡ್ಡದಾಗುತ್ತಿತ್ತು. ನಮ್ಮ ಸಮುದಾಯದವರೇ ಅತ್ಯಾಚಾರ ಮಾಡಿದ್ದಾರೆಂದು ಯುವತಿ ಹೇಳಿದ್ದಾಳೆ. ಅಪರಾಧಿಗಳು ಯಾರೇ ಇರಲಿ, ಅವರು ಅಪರಾಧಿಗಳೇ. ಸರ್ಕಾರ ತನ್ನ ನಿಯತ್ತು ತೋರಿಸಲು ಎಂದು ಒತ್ತಾಯಿಸಿದರು.