ಭರವಸೆ ಕೊಟ್ಟವರು ಈಗ ಎಲ್ಲಿದ್ದಾರೆ?

8 GJD 1- bjp protest
Published on

ಗಜೇಂದ್ರಗಡ: ನಾನು ಶಾಸಕನಾದರೆ ಉಣಚಗೇರಿ ಸರಹದ್ದಿನ ರೈತರ ಪಂಪ್​ಸೆಟ್​ಗಳಿಗೆ 24 ಗಂಟೆ ವಿದ್ಯುತ್ ನೀಡುತ್ತೇನೆ. ಒಂದು ವೇಳೆ ಮಾತು ತಪ್ಪಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ಈಗ ಎಲ್ಲಿದ್ದಾರೆ ಎಂದು ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಅಶೋಕ ವನ್ನಾಲ ವಾಗ್ದಾಳಿ ನಡೆಸಿದರು.


ಪಟ್ಟಣದಲ್ಲಿ ಬಿಜೆಪಿ ರೋಣ ಮಂಡಲ ರೈತ ಮೋರ್ಚಾ ವತಿಯಿಂದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ನಿಲುವು ವಿರೋಧಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ರೋಣ ಮಂಡಲ ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಾಳಾಜಿರಾವ್ ಬೋಸಲೆ ಮಾತನಾಡಿ, ರಾಜ್ಯದಲ್ಲಿ ಮಳೆ ಅಭಾವದಿಂದ ಬರಗಾಲದ ಸಮಸ್ಯೆ ಎದುರಾಗಿದೆ. ರಾಜ್ಯದ ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣ ಕುಸಿತ ಕಂಡಿದೆ. ಇದರಿಂದಾಗಿ ರೈತರ ಜಮೀನಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಉಂಟಾಗಿದೆ ಎಂದರು.


ಪ್ರತಿಭಟನೆಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ರಾಜೇಂದ್ರ ಘೊರ್ಪಡೆ, ಉಮೇಶ ಮಲ್ಲಾಪುರ, ಶಿವಾನಂದ ಮಠದ, ಮುತ್ತು ಕಡಗದ, ಕನಕಪ್ಪ ಅರಳಿಗಿಡದ, ಡಿ.ಜಿ. ಕಟ್ಟಿಮನಿ, ಭಾಸ್ಕರ ರಾಯಬಾಗಿ, ಉಮೇಶ ಚನ್ನುಪಾಟೀಲ, ಅನುರಾಗ ಚಿನಿವಾಲರ, ಶರಣಪ್ಪ ಕಂಬಳಿ, ಸೂಗೂರೇಶ ಚೋಳಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net