ಗೃಹಲಕ್ಷ್ಮಿ ಹಣ ಖಾತೆಗೆ ಯಾವಾಗ ಬರುತ್ತೆ ಮಿನಿಸ್ಟರ್ ಲಾಡ್ ಏನು ಹೇಳಿದ್ರು!

31 KLG 1 santosh lad
Published on

ಕಲಘಟಗಿ: ಈಗಾಗಲೇ ಶಕ್ತಿ ಯೋಜನೆ ಮೂಲಕ ಹೆಣ್ಣು ಮಕ್ಕಳು ಉಚಿತ ಬಸ್ ಸಂಚಾರ ಭಾಗ್ಯ ಪಡೆಯುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಮತ್ತು ಇನ್ನೈದು ಕೆಜಿ ಅಕ್ಕಿಯ ಬದಲು ಯಜಮಾನಿಯ ಖಾತೆಗೆ ಹಣ ಜಮಾ ಮಾಡಿದ್ದೇವೆ.

ಆಗಸ್ಟ್ 17ರಿಂದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯ ಖಾತೆಗೆ 2000 ರೂ. ಬರುತ್ತದೆ ಎಂದು ಕಾರ್ವಿುಕ ಸಚಿವ ಸಂತೋಷ ಲಾಡ್ ಹೇಳಿದರು.


ಜಿಪಂ ಧಾರವಾಡ, ತಾಪಂ ಕಲಘಟಗಿ ಮತ್ತು ಗ್ರಾಪಂ ತಂಬೂರು ಆಶ್ರಯದಲ್ಲಿ ತಾಲೂಇನ ತಂಬೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.


ನಾನು ನಿಮ್ಮ ಮನೆಗೆ ನಿಮ್ಮ ಸಮಸ್ಯೆಗಳನ್ನು ಕೇಳಲು ಬಂದಿದ್ದೇನೆ. ನಮ್ಮ ಸರ್ಕಾರ ಕೊಟ್ಟ ಭರವಸೆಯಂತೆ ಎಲ್ಲ ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ ಎಂದರು.


ತಂಬೂರು ವ್ಯಾಪ್ತಿಯ ಗ್ರಾಮಗಳಾದ ಜುಂಜನಬೈಲ್, ಶಿಂಗನಹಳ್ಳಿ ಮತ್ತು ತಂಬೂರು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಆರೋಗ್ಯ ಉಪಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಸಮಸ್ಯೆಗಳು ಕೇಳಿ ಬಂದವು. ಸಂಗಟಿಕೊಪ್ಪ ಮತ್ತು ಜುಂಜನಬೈಲ್ ಕ್ರಾಸ್​ನಲ್ಲಿ ಹುಬ್ಬಳ್ಳಿ- ಕಾರವಾರ ಮಧ್ಯೆ ಸಂಚರಿಸುವ ಬಸ್​ಗಳ ನಿಲುಗಡೆಗೆ ಗ್ರಾಮಸ್ಥರು ಮನವಿ ಮಾಡಿದರು.


ಗ್ರಾಮಗಳ ಸಮಸ್ಯೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂಗಮೇಶ್ವರದಿಂದ ಹಳಿಯಾಳ ರಸ್ತೆ ಸಂರ್ಪಸುವ ರಸ್ತೆ ಸುಧಾರಣೆ ಹಾಗೂ ಸೇತುವೆ ಮೇಲ್ದರ್ಜೆಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗ ಹೊಸ ಕಟ್ಟಡ ನಿರ್ವಿುಸಬೇಕು. ಅಲ್ಲದೆ, ಸಮುದಾಯ ಭವನ, ಸಿಸಿ ರಸ್ತೆ, ಸಂಗಮೇಶ್ವರ ಕೆರೆ ದುರಸ್ತಿ, ಪಿಯು ಕಾಲೇಜ್​ಗೆ ರಸ್ತೆ ಮತ್ತು ಮೈದಾನ, ಸ್ಮಶಾನಕ್ಕೆ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಸತಿ ಗೃಹ, ಆಂಬುಲೆನ್ಸ್ ಸೇವೆ ಕಲ್ಪಿಸಲು ಸೇರಿ ಹಲವು ವಿಷಯಗಳ ಕುರಿತು ಸಚಿವರಿಗೆ ಗ್ರಾಮಸ್ಥರು ಆಗ್ರಹಿಸಿದರು.


ತಂಬೂರು ಗ್ರಾಮ ಪಂಚಾಯಿತಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಎಸ್.ಆರ್. ಪಾಟೀಲ, ಬಿ.ವೈ. ಪಾಟೀಲ, ಮಹೇಶ ಅಲಗೂರ, ಗ್ರಾಮ ಪಂಚಾಯಿತಿ ಸದಸ್ಯರು, ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net