ಕೌಶಲ ಇದ್ದಾಗ ಶ್ರೇಷ್ಠ ಕೃತಿ ಮೂಡಲು ಸಾಧ್ಯ

sanmana-1
Published on

ಕಾರ್ಕಳ: ದೇವರ ಮೇಲೆ ಭಕ್ತಿ, ಸಾಹಿತ್ಯದ ಮೇಲೆ ಪ್ರೀತಿ ಮತ್ತು ಕಲಾ ಕೌಶಲದ ಸಾಮರ್ಥ್ಯವಿದ್ದಾಗ ಶ್ರೇಷ್ಠ ಕೃತಿಗಳು ಮೂಡಿಬರುತ್ತವೆ. ಬಳಸಿದ ಉಪಕರಣ ಯಾವುದೇ ಇರಲಿ ಮಹತ್ವಪೂರ್ಣ ಕಲಾರಚನೆ ಮತ್ತು ಪ್ರದರ್ಶನಕ್ಕೆ ಸಾಕ್ಷಿಯಾಗುತ್ತದೆ ಎಂದು ನಿವೃತ್ತ ಲೆಕ್ಕಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್ ಹೇಳಿದರು.

1200 ಚಾಕ್ ಪೀಸ್ ಬಳಸಿ ಗೀತೋಪದೇಶ ಕಲಾಕೃತಿ ನಿರ್ಮಿಸಿದ 73ರ ಹರೆಯದ ಹಿರಿಯ ಕಲಾವಿದ ಚೋಲ್ಪಾಡಿ ರಾಮಕೃಷ್ಣ ಕಾಮತ್ ಅವರನ್ನು ಎಸ್‌ವಿಟಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಸನ್ಮಾನಿಸಿ ಮಾತನಾಡಿದರು.

ಎಸ್‌ವಿಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ.ಶೆಣೈ, ಎಸ್‌ವಿಟಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನೇಮಿರಾಜ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಹೊಸಸಂಜೆ ಬಳಗ ಅಧ್ಯಕ್ಷ ಆರ್.ದೇವರಾಯ ಪ್ರಭು ಸ್ವಾಗತಿಸಿದರು. ಚೋಲ್ಪಾಡಿ ಸದಾಶಿವ ಕಾಮತ್ ವಂದಿಸಿದರು. ವರದರಾಯ ಪ್ರಭು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net