ಸರ್ಕಾರಿ ಆಸ್ಪತ್ರೆಯಲ್ಲೇ ಸೌಲಭ್ಯ ಇರುವಾಗ ಬೇರೆಯವರ ಮೊರೆ ಏಕೆ?

29sgr4
ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಪಲ್ಲವಿ ಸಾತೇನಹಳ್ಳಿ, ಭರತ್, ಪ್ರಕಾಶ್ ಬೋಸ್ಲೆ, ವಿಕ್ರಮ್, ಗಜೇಂದ್ರ ಇತರರಿದ್ದರು.
Published on

ಸಾಗರ: ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇರುವಾಗ ಔಷಧ ಹಾಗೂ ತಪಾಸಣೆಗಾಗಿ ಖಾಸಗಿ ಲ್ಯಾಬ್, ಮೆಡಿಕಲ್ ಶಾಪ್‌ಗಳಿಗೆ ಬರೆದುಕೊಡಲಾಗುತ್ತಿದೆ. ಈ ಕುರಿತು ನನಗೆ ಸಾಕಷ್ಟು ದೂರುಗಳು ಬಂದಿವೆ. ನಿಮ್ಮ ಈ ವರ್ತನೆಯನ್ನು ತಿದ್ದುಕೊಳ್ಳದಿದ್ದರೆ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದರು.

ಸಾಗರದ ಉಪವಿಭಾಗೀಯ ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಡಯಾಲಿಸಿಸ್ ಘಟಕ ಉದ್ಘಾಟಿಸಿದ ನಂತರ ವೈದ್ಯಕೀಯ ಸಿಬ್ಬಂದಿ ಸಭೆ ನಡೆಸಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಉತ್ತಮ ಔಷಧ ಪೂರೈಸಲಾಗುತ್ತಿದೆ. ಸುಸಜ್ಜಿತ ಪ್ರಯೋಗಾಲಯ ಇದ್ದರೂ ಬೇರೆ ಲ್ಯಾಬ್‌ಗಳಿಗೆ ಕಳಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಲ್ಯಾಬ್‌ನಲ್ಲಿರುವ ಯಂತ್ರಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ಮೊದಲು ಸರಿಪಡಿಸಿ ಜನರಿಗೆ ಉತ್ತಮ ಸೇವೆ ನೀಡಿ ಎಂದು ಸೂಚಿಸಿದರು.
ವೈದ್ಯೆ ಡಾ. ಪ್ರತಿಮಾ ಮಾತನಾಡಿ, ತಾಯಿ-ಮಗು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಹೆಚ್ಚುವರಿ ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜಿಸಲು ಮನವಿ ಮಾಡಿದರು. ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ ಮಾತನಾಡಿ, ಉಪವಿಭಾಗೀಯ, ತಾಯಿ-ಮಗು ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ಸಲ್ಲಿಸಲಾಗುತ್ತಿದೆ. ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಿಕೊಂಡು ಜನಸ್ನೇಹಿ ಆರೋಗ್ಯ ಸೇವೆ ನೀಡುವುದಾಗಿ ತಿಳಿಸಿದರು.
ಉಪವಿಭಾಗಾಽಕಾರಿ ಪಲ್ಲವಿ ಸಾತೇನಹಳ್ಳಿ, ತಾಲೂಕು ಆರೋಗ್ಯಾಽಕಾರಿ ಡಾ. ಭರತ್, ಡಾ. ಪ್ರಕಾಶ್ ಬೋಸ್ಲೆ, ಡಾ. ವಿಕ್ರಮ್, ಡಾ. ಗಜೇಂದ್ರ, ಡಾ. ಮಹೇಂದ್ರ, ಪ್ರಮುಖರಾದ ನಾಗೇಶ್ ಬ್ಯಾಲದ್, ಸುನೀಲ್‌ಕುಮಾರ್, ಎಸ್.ನಾಗರಾಜಪ್ಪ, ಜುಬೇದಾ ಇತರರಿದ್ದರು.

ಡಯಾಲಿಸಿಸ್ ಕೇಂದ್ರದಲ್ಲಿ ಉತ್ತಮ ಸೇವೆ ನೀಡಿ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ಸರ್ಕಾರದಿಂದ ಅಗತ್ಯ ಅನುದಾನ ತಂದುಕೊಡುತ್ತೇನೆ. ಅಗತ್ಯವಿರುವ ಔಷಧ, ಮಾತ್ರೆಗಳ ವಿವರ ಕೊಟ್ಟರೆ ಸಂಬAಽಸಿದ ಸಚಿವರ ಹತ್ತಿರ ಮಾತನಾಡಿ ತರಿಸಿಕೊಡುತ್ತೇನೆ. ಅದು ಬಿಟ್ಟು ಹೊರಗೆ ಚೀಟಿ ಬರೆದುಕೊಡುವುದನ್ನು ಸಹಿಸುವುದಿಲ್ಲ.| ಗೋಪಾಲಕೃಷ್ಣ ಬೇಳೂರುಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net