

ಕಡಬ: ವಾಟ್ಸಾಪ್ ಗುಂಪುಗಳಲ್ಲಿ ಬಂದ ಸ್ವಾಮೀಜಿಯನ್ನು ಹೋಲುವ ಚಿತ್ರವೊಂದನ್ನು ವರ್ತಕರೊಬ್ಬರು ವಾಟ್ಸಪ್ ಸ್ಟೇಟಸ್ ಹಾಕಿದ ವಿಚಾರ ಚರ್ಚೆಗೊಂಡು ಠಾಣೆಗೆ ದೂರು ನೀಡುವ ಹಂತಕ್ಕೆ ತಲುಪಿ ಬಳಿಕ ಕ್ಷಮೆಯಾಚಿಸಿದ ಹಿನ್ನೆಲೆ ಮಾತುಕತೆಯಲ್ಲೇ ಇತ್ಯರ್ಥಪಡಿಸಿದ ಘಟನೆ ಕಡಬದಲ್ಲಿ ನಡೆದಿದೆ.
ಸ್ವಾಮೀಜಿಯ ಚಿತ್ರಕ್ಕೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅಣ್ಣಾಮಲೈ ಅವರ ಮುಖವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಚಿತ್ರವನ್ನು ವರ್ತಕರೊಬ್ಬರು ರಾಜಕೀಯ ಸಂಬಂಧಿಸಿ ಪೋಟೊ ಎಂದು ಭಾವಿಸಿ ಸ್ಟೇಟಸ್ ಹಾಕಿಕೊಂಡಿದ್ದರು. ನಂತರ ತಪ್ಪಾಗಿ ಸ್ಟೇಟಸ್ ಹಾಕಿರುವುದಾಗಿ ಕ್ಷಮೆಯಾಚಿಸಿ ಪೋಸ್ಟ್ ಹಂಚಿಕೊಂಡಿದ್ದರು.
ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ದುರ್ಗಾಂಬಿಕಾ ದೇಗುಲದ ಬಳಿ ಸೇರಿ ದೂರು ನೀಡುವ ಬಗ್ಗೆ ಸಮಾಲೋಚನೆ ನಡೆಸಿದ್ದರು. ಸ್ಟೇಟಸ್ ಹಾಕಿದ ವರ್ತಕರು ಆಗಮಿಸಿ ನಡೆದ ಸಂಗತಿಯನ್ನು ವಿವರಿಸಿ ಕ್ಷಮೆ ಯಾಚಿಸಿದ್ದರು.
ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಈ ಹಿಂದೆ ಮೊಬೈಲ್ ಅಂಗಡಿ ಸಿಬ್ಬಂದಿ ಸ್ಟೇಟಸ್ ಹಾಕಿದ ವಿಚಾರವನ್ನು ಪ್ರಸ್ತಾಪಿಸಿ, ಅಂದು ಕೇಸು ದಾಖಲಾಗುವಂತೆ ಮಾಡಲಾಗಿತ್ತು. ಪುನರಾವರ್ತನೆ ಸರಿಯಲ್ಲ, ಹಿಂದು ಸಮಾಜ ಜಾಗೃತವಾಗಿದೆ ಎಂದಿರುವುದು ವಿಡಿಯೋದಲ್ಲಿದೆ.